ಬುಧವಾರ, ಮೇ 25, 2022
27 °C

UP polls: ಆಜಾದ್‌ ಸಮಾಜ ಪಾರ್ಟಿ ಏಕಾಂಗಿಯಾಗಿ ಕಣಕ್ಕೆ– ಚಂದ್ರಶೇಖರ್‌ ಆಜಾದ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಆಜಾದ್‌ ಸಮಾಜ ಪಾರ್ಟಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಹೇಳಿದರು.

ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 'ನಾವು ಉತ್ತರ ಪ್ರದೇಶದಲ್ಲಿ ಪರ್ಯಾಯವಾಗಿ ನಿಲ್ಲುತ್ತೇವೆ (ಇತರೆ ರಾಜಕೀಯ ಪಕ್ಷಗಳಿಗೆ). ಶಾಸಕ ಮತ್ತು ಸಚಿವ ಸ್ಥಾನದ ಆಫರ್‌ಗಳನ್ನು ನಾನು ತಿರಸ್ಕರಿಸಿದ್ದೇನೆ' ಎಂದರು.

'ಸಮಾಜವಾದಿ ಪಕ್ಷವು ನಮಗೆ 100 ಸ್ಥಾನಗಳನ್ನು ನೀಡಿದರೂ ಅವರೊಂದಿಗೆ ಹೋಗುವುದಿಲ್ಲ. ಬಿಜೆಪಿಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣೆಯ ನಂತರ ಇತರೆ ಪಕ್ಷಗಳಿಗೆ ನಾವು ನೆರವಾಗಬಹುದು' ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಕಾಂಗ್ರೆಸ್ ಜೊತೆಗೆ ಮೈತ್ರಿಯ ಬಗೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಜಾದ್‌, 'ಕಾಂಗ್ರೆಸ್‌ನೊಂದಿಗೆ ಮೈತ್ರಿಗಾಗಿ ಮಾತುಕತೆ ನಡೆಯುತ್ತಿದೆ. ಸಂಜೆ ವೇಳೆಗೆ ಆ ಬಗ್ಗೆ ಸ್ಪಷ್ಟತೆ ಸಿಗಲಿದೆ. ನಾನು ಮಾಯಾವತಿ ಅವರ ಪಕ್ಷದೊಂದಿಗೂ ಮೈತ್ರಿಗಾಗಿ ಪ್ರಯತ್ನಿಸಿದೆ, ಆದರೆ ಅವರಿಂದ ಯಾರೊಬ್ಬರೂ ಸಂಪರ್ಕಿಸಲಿಲ್ಲ' ಎಂದರು.

ಇದನ್ನೂ ಓದಿ:

'ನಾನು ನನ್ನ ವೈಯಕ್ತಿಕ ಸಂತಸಗಳ ಬಗೆಗೆ ತಲೆ ಕೆಡಿಸಿಕೊಂಡವನಲ್ಲ. ಕಳೆದ ಐದು ವರ್ಷಗಳಲ್ಲಿ ನಾನು ಸಾಕಷ್ಟು ಕಳೆದುಕೊಂಡಿರುವೆ. ಹಾಥರಸ್‌, ಪ್ರಯಾಗ್‌ರಾಜ್‌ ಹಾಗೂ ಉನ್ನಾವೊದಲ್ಲಿ ನಡೆದಂತಹ ಘಟನೆಗಳನ್ನು ವಿರೋಧಿಸಿ ಜೈಲಿಗೆ ಹೋಗಿರುವೆ. ವಿರೋಧ ಪಕ್ಷಗಳನ್ನು ವಿಭಜಿಸುವ ಮೂಲಕ ಬಿಜೆಪಿ ಏನಾದರೂ ಮತ್ತೆ ಅಧಿಕಾರಕ್ಕೆ ಬಂದರೆ, ಅದು ಎಲ್ಲರ ಸೋಲು ಆಗಲಿದೆ,' ಎಂದು ಅಭಿಪ್ರಾಯ ಪಟ್ಟರು.

ಭೀಮ್‌ ಆರ್ಮಿ ಕಾರ್ಯಕರ್ತರು ನಮ್ಮ ಬಲ ಎಂದು ಹೇಳಿದರು.

ಇದನ್ನೂ ಓದಿ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು