ಭಾನುವಾರ, ಆಗಸ್ಟ್ 14, 2022
25 °C
ಜನಸಂಖ್ಯಾ ನಿಯಂತ್ರಣ ಮಸೂದೆ, ಚುನಾವಣಾ ಕಾರ್ಯಸೂಚಿ –ಆರೋಪ

ಜನಸಂಖ್ಯೆ ನಿಯಂತ್ರಿಸಲು ವಿವಾಹವನ್ನೇ ನಿಷೇಧಿಸಿ ಬಿಡಿ: ಸಂಸದ ಬರಾಕ್ ವ್ಯಂಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಂಭಾಲ್‌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ‘ಜನಸಂಖ್ಯಾ ನಿಯಂತ್ರಣ ಮಸೂದೆ‘, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿದೆ‘ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಸಂಸದ ಶಾಫೀಕ್‌ ಉರ್‌ ರೆಹಮಾನ್‌ ಬಾರಕ್‌, ‘ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದರೆ, ರಾಜ್ಯ ಸರ್ಕಾರ ವಿವಾಹಗಳನ್ನೇ ನಿಷೇಧಿಸಬೇಕು‘ ಎಂದು ವ್ಯಂಗ್ಯವಾಡಿದ್ದಾರೆ.

‘ಜನಸಂಖ್ಯೆ ನಿಯಂತ್ರಿಸಲು ವಿವಾಹ ನಿಷೇಧಿಸುವುದೇ ಉತ್ತಮ. ಮುಂದಿನ 20 ವರ್ಷಗಳವರೆಗೆ ಯಾರೂ ಮದುವೆಯಾಗಬಾರದು ಎಂದು ಕಾನೂನು ತಂದರಾಯಿತು. ಆಗ ಮಕ್ಕಳ ಜನನದ ವಿಚಾರವೇ ಬರುವುದಿಲ್ಲವಲ್ಲ‘ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಸರ್ಕಾರದ ಜನಸಂಖ್ಯಾ ನೀತಿಯನ್ನು ಟೀಕಿಸಿದ್ದಾರೆ.

‘ಇದೆಲ್ಲ ಬಿಜೆಪಿಯವರು ಚುನಾವಣೆ ಪ್ರಚಾರಕ್ಕಾಗಿ ಜಾರಿಗೆ ತಂದಿರುವ ಮಸೂದೆ. ಅವರು ಎಲ್ಲ ವಿಚಾರವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೆ. ಆ ಪಕ್ಷದವರು ಕೈಗೊಳ್ಳುವ ನಿರ್ಧಾರಗಳು ಚುನಾವಣೆ ಗೆಲ್ಲುವ ಉದ್ದೇಶವನ್ನು ಹೊಂದಿರುತ್ತವೆಯೇ ಹೊರತು ಜನರ ಹಿತವನ್ನು ಒಳಗೊಂಡಿರುವುದಿಲ್ಲ‘ ಎಂದು ಆರೋಪಿಸಿದ್ದಾರೆ.

‘ಈಗ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಅವರ ಎಲ್ಲ ನಿರ್ಧಾರಗಳು ಚುನಾವಣಾ ಕೇಂದ್ರೀಕೃತವಾಗಿರುತ್ತವೆ. ಅಲ್ಲಾಹ್‌ನ ಆಶೀರ್ವಾದದಿಂದ, ಅವರು ಚುನಾವಣೆಯಲ್ಲಿ ಗೆಲ್ಲಲು ನಾವು ಬಿಡುವುದಿಲ್ಲ‘ ಎಂದು ಬಾರಕ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು