ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಮುಂದೆ ಮದ್ಯ ಸೇವಿಸಿದ ಶಿಕ್ಷಕ ಅಮಾನತು

Last Updated 3 ಅಕ್ಟೋಬರ್ 2022, 13:50 IST
ಅಕ್ಷರ ಗಾತ್ರ

ಲಖನೌ: ತರಗತಿಯಲ್ಲಿ ವಿದ್ಯಾರ್ಥಿಗಳ ಎದುರೇ ಮದ್ಯ ಸೇವಿಸಿದಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕನ ವಿಡಿಯೊವೊಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಶಿಕ್ಷಕನನ್ನು ಶೈಲೆಂದರ್‌ ಸಿಂಗ್‌ ಗೌತಮ್‌ ಎಂದು ಗುರುತಿಸಲಾಗಿದೆ.

ಈ ವಿಡಿಯೊವನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಾಲಿವಲ್‌ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಆಗ್ರಹ ಪಡಿಸಿದ್ದಾರೆ.

‘ಘಟನೆಯ ಕುರಿತ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ವರದಿ ಬಂದ ಬಳಿಕ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ವಿಡಿಯೊದಲ್ಲಿ ಏನಿದೆ?: ಶಾಲೆಯ ತರಗತಿಯಲ್ಲಿ ಇರಿಸಿದ್ದ ಟೇಬಲ್‌ ಕೆಳಗೆ ಮತ್ತು ತಮ್ಮ ಬೆನ್ನ ಹಿಂದೆ ಬಿಯರ್‌ ಬಾಟಲಿಗಳನ್ನು ಮುಚ್ಚಿಟ್ಟುಕೊಂಡು, ಶೈಲೆಂದರ್‌ ಅವರು ವಿದ್ಯಾರ್ಥಿಗಳೊಂದಿಗೆತರಗತಿಯಲ್ಲಿರುವ ದೃಶ್ಯಗಳು ವಿಡಿಯೊದಲ್ಲಿದೆ.

ವಿಡಿಯೊವನ್ನು ಯಾರು ಚಿತ್ರೀಕರಿಸಿದ್ದಾರೆ ಎನ್ನುವ ಬಗ್ಗೆ ಖಾತರಿ ಇಲ್ಲ. ಆದರೆ, ಶೈಲೆಂದರ್ ಅವರ ನಡೆಯನ್ನು ವಿರೋಧಿಸಿದ ವ್ಯಕ್ತಿಯೊಂದಿಗೆ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಶೈಲೆಂದರ್‌ ವಾದಿಸುತ್ತಿರುವ ತುಣುಕು ಸೆರೆಯಾಗಿದೆ. ವಿಡಿಯೊ ಮಾಡಬೇಡಿ ಎಂದು ಮನವಿ ಮಾಡುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ. ಈ ವೇಳೆ ಶೈಲೆಂದರ್ ಪಕ್ಕದಲ್ಲೇ ಇರುವ ಶಿಕ್ಷಕಿಯೊಬ್ಬರು ನಶೆಯಲ್ಲಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT