ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿಗೆ ನೆರವಾದ ಎಲ್ಲರಿಗೂ ಹಿರಿಮೆ ಸಲ್ಲಲಿದೆ: ಯುಪಿಎಸ್‌ಸಿ ಟಾಪರ್ ಶ್ರುತಿ

Last Updated 30 ಮೇ 2022, 13:25 IST
ಅಕ್ಷರ ಗಾತ್ರ

ನವದೆಹಲಿ: ‘ನನ್ನ ಈ ಯಶಸ್ಸಿನ ಪಥದಲ್ಲಿ ಸಾಗಲು ನೆರವಾದ ಎಲ್ಲರಿಗೂ, ಮುಖ್ಯವಾಗಿ ನನ್ನ ತಂದೆ–ತಾಯಿಗೆ ಇದರ ಹಿರಿಮೆ ಸಲ್ಲಬೇಕು. ತಂದೆ–ತಂದೆ ಎಲ್ಲ ಬೆಂಬಲ ನೀಡಿದರು. ಸ್ನೇಹಿತರು ಮಾರ್ಗದರ್ಶನ ಮಾಡಿದರು’.

2021ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ವಿಜೇತೆ ಶ್ರುತಿ ಶರ್ಮಾ ಅವರ ಪ್ರತಿಕ್ರಿಯೆ ಇದು. ‘ಪ್ರಥಮ ರ‍್ಯಾಂಕ್ ನಿರೀಕ್ಷಿಸಿರಲಿಲ್ಲ. ಇದೊಂದು ಅನಿರೀಕ್ಷಿತ ಸಂಭ್ರಮ’ ಎಂದು ಶ್ರುತಿ ಹೇಳಿದರು.

ದೆಹಲಿ ನಿವಾಸಿಯಾದ ಅವರು ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್‌ ಕಾಲೇಜು ವಿದ್ಯಾರ್ಥಿನಿ. ಜವಾಹರಲಾಲ್ ನೆಹರೂ ಯೂನಿವರ್ಸಿಟಿಯ (ಜೆಎನ್‌ಯು) ಸ್ನಾತಕೋತ್ತರ ಪದವೀಧರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯ ವಸತಿ ಕೋಚಿಂಗ್‌ ಅಕಾಡೆಮಿಯ (ಆರ್‌ಸಿಎ) ವಿದ್ಯಾರ್ಥಿನಿಯೂ ಆದ ಅವರು ನಾಲ್ಕು ವರ್ಷದಿಂದ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದರು. ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಸಹಿತ, ತರಬೇತಿ ನೀಡಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಆರ್‌ಸಿಎ ಅನ್ನು ಸ್ಥಾಪಿಸಿದೆ.

ಆರ್‌ಸಿಎ ಅಧಿಕಾರಿಯ ಪ್ರಕಾರ, 2021ನೇ ಸಾಲಿನಲ್ಲಿ ಕೋಚಿಂಗ್‌ ಸೆಂಟರ್‌ನ ಒಟ್ಟು 23 ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT