ಪ್ರಧಾನಿ ಮೋದಿ ಭೇಟಿಯಾದ ಅಮೆರಿಕ ಸಂಸದರ ನಿಯೋಗ

ನವದೆಹಲಿ: ಅಮೆರಿಕದ ಸಂಸದರ ನಿಯೋಗವು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿತು. ಭಾರತ –ಅಮೆರಿಕ ನಡುವಣ ಬಾಂಧವ್ಯ ವೃದ್ಧಿಗೆ ಅಮೆರಿಕ ಸಂಸತ್ತಿನ ನಿರಂತರ ಬೆಂಬಲವಿದೆ ಎಂದು ಮೋದಿ ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಪ್ರಧಾನಮಂತ್ರಿಗಳ ಕಚೇರಿ ಈ ಕುರಿತು ಹೇಳಿಕೆ ನೀಡಿದ್ದು, ಸಂಸದ ಜಾನ್ ಕಾರ್ನಿನ್ ಅವರು ನಿಯೋಗದ ನೇತೃತ್ವ ವಹಿಸಿದ್ದರು. ಸೆನೆಟರ್‌ಗಳಾದ ಮೈಕೆಲ್ ಕ್ರಾಪೊ, ಥಾಮಸ್ ಟುಬೆರ್‌ವಿಲೆ, ಮೈಕೆಲ್ ಲೀ, ಸಂಸದರಾದ ಟೊನಿ ಗೊನ್‌ಜಲೆಸ್, ಜಾನ್ ಕೆವಿನ್ ಎಲಿಜೆ ಇದ್ದರು ಎಂದು ತಿಳಿಸಿದೆ.
ಕಾರ್ನಿನ್ ಅವರು ಭಾರತ, ಭಾರತೀಯ ಅಮೆರಿಕನ್ನರ ಸಂಸದರ ಸಮಿತಿ ಸಹ ಸ್ಥಾಪಕರು ಆಗಿದ್ದಾರೆ. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವಿಷಯಗಳು, ಜಾಗತಿಕವಾಗಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಪರಸ್ಪರ ಸಹಕಾರ ಕುರಿತ ವಿಷಯಗಳು ಭೇಟಿಯ ವೇಳೆ ಪ್ರಸ್ತಾಪವಾದವು ಎಂದು ಹೇಳಿಕೆಯು ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.