ಶನಿವಾರ, ಮೇ 28, 2022
26 °C

ಸಂತೂರ್‌ ಮಾಂತ್ರಿಕನ ಕೊನೆಯ ಪಯಣ; ಹೆಗಲು ಕೊಟ್ಟ ತಬಲಾ ಸಾಥಿ ಝಾಕಿರ್ ಹುಸೇನ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಖ್ಯಾತ ಸಂತೂರ್ ವಾದಕ ಮತ್ತು ಸಂಗೀತ ನಿರ್ದೇಶಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ಅಂತ್ಯಕ್ರಿಯೆ ನಗರದ ವಿಲೇಪಾರ್ಲೆಯಲ್ಲಿರುವ ಪವನ್ ಹನ್ಸ್ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು. 

ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಸೇರಿದಂತೆ ಸ್ನೇಹಿತರು, ಅಭಿಮಾನಿಗಳು ಭಾಗವಹಿಸಿದ್ದರು.

ಶಿವಕುಮಾರ್ ಶರ್ಮಾ ಮತ್ತು ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್ ಅವರು ಹಲವು ದಶಕಗಳಿಂದ ಸ್ನೇಹಿತರಾಗಿದ್ದರು. ಅವರ ನಡುವೆ ಉತ್ತಮ ಬಾಂಧವ್ಯವಿತ್ತು.

ಶಿವಕುಮಾರ್ ಶರ್ಮಾ ಮತ್ತು ಝಾಕಿರ್ ಹುಸೇನ್ ಜೋಡಿ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಮೋಡಿ ಮಾಡಿದ್ದರು. 

ಸ್ನೇಹಿತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದ ಝಾಕಿರ್ ಹುಸೇನ್, ಅಂತಿಮ ವಿಧಿವಿಧಾನಗಳು ಸೇರಿದಂತೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವವರೆಗೆ ಸ್ಥಳದಲ್ಲೇ ಬೀಡುಬಿಟ್ಟಿದ್ದರು. 

ಕುಟುಂಬಸ್ಥರು, ಅಪ್ತರು, ಅಭಿಮಾನಿಗಳು ಶಿವಕುಮಾರ್ ಶರ್ಮಾ ಅಗಲಿಕೆಯಿಂದ ಮೌನಕ್ಕೆ ಶರಣದ ದೃಶ್ಯ ಮನಕಲಕುವಂತಿತ್ತು.

ಶಿವಕುಮಾರ್ ಶರ್ಮಾ, ಮುಂಬೈನ ಪಾಲಿಹಿಲ್ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

 ಓದಿ... ಸಂತೂರ್‌ ವಾದಕ ಪಂಡಿತ್‌ ಶಿವಕುಮಾರ್‌ ಶರ್ಮಾ ನಿಧನ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು