ಶುಕ್ರವಾರ, ಏಪ್ರಿಲ್ 23, 2021
30 °C

ಉತ್ತರಾಖಂಡದಲ್ಲಿ ಹಿಮಪಾತ: ಮತ್ತೊಂದು ಶವ ಪತ್ತೆ; ಮೃತರ ಸಂಖ್ಯೆ 62ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹಕ್ಕೆ ಸಿಲುಕಿದ್ದವರ ಪತ್ತೆ ಕಾರ್ಯ 13 ನೇ ದಿನವೂ ಮುಂದುವರಿದಿದ್ದು, ಗುರುವಾರ ಶವವೊಂದನ್ನು ಹೊರತೆಗೆಯಲಾಗಿದೆ.

‘ಎನ್‌ಟಿ‍‍ಸಿ ತಪೋವನ–ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಗುರುವಾರ ರಾತ್ರಿ ಶವ ಪತ್ತೆಯಾಗಿದೆ’ ಎಂದು ಚಮೋಲಿ ಜಿಲ್ಲಾ ಪೊಲೀಸರು ಶುಕ್ರವಾರ ತಿಳಿಸಿದರು.

‘ಈವರೆಗೆ ಒಟ್ಟು 62 ಶವಗಳು ಪತ್ತೆಯಾಗಿವೆ. 142 ಜನರು ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ ತಪೋವನ–ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ 13 ಶವಗಳು ಪತ್ತೆಯಾಗಿವೆ. ಇದನ್ನು ಹೊರತು‍‍ಪಡಿಸಿ ಹಲವೆಡೆ 28 ಕೈಕಾಲುಗಳು ಸಿಕ್ಕಿವೆ. ಪತ್ತೆಯಾಗಿರುವ 62 ಶವಗಳಲ್ಲಿ 33 ಜನರನ್ನು ಗುರುತಿಸಲಾಗಿದೆ. ಉಳಿದವರ ಡಿಎನ್‌ಎಗಳನ್ನು ಸಂರಕ್ಷಿಸಲಾಗಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು