ಮಂಗಳವಾರ, ಏಪ್ರಿಲ್ 20, 2021
31 °C
ನೀರ್ಗಲ್ಲು ಕುಸಿತದ ನಂತರದ ಪರಿಸ್ಥಿತಿ ಅಧ್ಯಯನ

ನೀರ್ಗಲ್ಲು ಕುಸಿತದಿಂದ ರಿಷಿಗಂಗಾದಲ್ಲಿ ಸೃಷ್ಟಿಯಾದ ಕೃತಕ ಸರೋವರ ಪರಿಶೀಲನೆಗೆ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರೈನಿ (ಉತ್ತರಾಖಂಡ): ಉತ್ತರಾಖಂಡದ ಜೋಶಿಮಠದ ಬಳಿ ಇತ್ತೀಚೆಗೆ ನೀರ್ಗಲ್ಲು ಕುಸಿತದ ನಂತರ, ರಿಷಿಗಂಗಾ ಮೇಲೆ ರೂಪುಗೊಂಡಿರುವ ಕೃತಕ ಸರೋವರದಿಂದ ಯಾವ ರೀತಿ ಅಪಾಯವಾಗಬಹುದು ಎಂಬುದನ್ನು ಪರೀಕ್ಷಿಸುವುದಕ್ಕಾಗಿ ಶನಿವಾರ ಸಂಶೋಧನಾ ತಂಡವೊಂದು ಪಾಂಗ್ ಹಳ್ಳಿಗೆ ಬಂದಿದೆ.

ಅಧ್ಯಯನದ ಸಂಬಂಧ ರಚನೆಯಾಗಿರುವ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಉತ್ತರಾಖಂಡ ಬಾಹ್ಯಾಕಾಶ ಅನ್ವಯಿಕ ಕೇಂದ್ರದಿಂದ ತಲಾ ನಾಲ್ಕು ವಿಜ್ಞಾನಿಗಳನ್ನೊಳಗೊಂಡ ಯುಎಸ್ಎಸಿ ನಿರ್ದೇಶಕ ಎಂಪಿಎಸ್ ಬಿಷ್ಟ್‌ ನೇತೃತ್ವದ ಸಂಶೋಧನಾ ತಂಡ ಶನಿವಾರ ಸಂಜೆ ಅಥವಾ ಭಾನುವಾರ ಕಾಲ್ನಡಿಗೆಯಲ್ಲಿ ಸರೋವರವನ್ನು ತಲುಪಲು ಪ್ರಯತ್ನಿಸುತ್ತಿದೆ.

ಇತ್ತೀಚೆಗೆ ನೀರ್ಗಲ್ಲು ಕುಸಿತದಿಂದ ಸಂಭವಿಸಿದ ಪ್ರವಾಹದಿಂದಾಗಿ ರೈನಿ ಗ್ರಾಮ ಪಂಚಾಯತ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರಸ್ತೆಗಳು ಹಾಳಾಗಿದ್ದು, ಜೌಗು ಪ್ರದೇಶಗಳಾಗಿ ಮಾರ್ಪಟ್ಟಿವೆ. ಈ ಹಿನ್ನೆಲೆಯಲ್ಲಿ ಬಿಷ್ಟ ನೇತೃತ್ವದ ಅಧ್ಯಯನ ತಂಡ, ಸರೋರವರದವರೆಗೆ ಸುರಕ್ಷಿತವಾಗಿ ಸಾಗಲು ನೆಹರು ಪರ್ವತಾರೋಹಣ ಸಂಸ್ಥೆ ಮತ್ತು ಎಸ್‌ಡಿಆರ್‌ಎಫ್‌ ತಂಡದ ನೆರವನ್ನು ಪಡೆಯುತ್ತಿದೆ.

‘ಹಿಮಪಾತದ ನಂತರ, ರಿಷಿಗಂಗಾದ ಮೇಲೆ ರೂಪುಗೊಂಡಿರುವ ಸರೋವರವನ್ನು ಪರಿಶೀಲಿಸುತ್ತೇವೆ‘ ಎಂದು ಯುಎಸ್ಎಸಿ ನಿರ್ದೇಶಕ ಬಿಷ್ಟ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು