2021ರ ಮಾರ್ಚ್‌ವರೆಗೂ ಡಿಎಲ್ ಸಿಂಧುತ್ವ ಅವಧಿ ವಿಸ್ತರಣೆ: ಸಾರಿಗೆ ಸಚಿವಾಲಯ

ನವದೆಹಲಿ: ಚಾಲನಾ ಪರವಾನಗಿ (ಡಿಎಲ್) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ 2021ರ ಮಾರ್ಚ್ 31ರ ವರೆಗೂ ಅದರ ಸಿಂಧುತ್ವ ಅವಧಿ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಕೋವಿಡ್–19 ಹರಡುವಿಕೆ ತಡೆಯುವ ಪ್ರಯತ್ನದ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಈ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ರವಾನಿಸಿದೆ.
ನೋಂದಣಿ ಪ್ರಮಾಣ ಪತ್ರ (ಆರ್‌ಸಿ), ಡಿಎಲ್, ಪರ್ಮಿಟ್‌ಗಳು, ಫಿಟ್ನೆಸ್ ಸರ್ಟಿಫಿಕೆಟ್ ಸೇರಿದಂತೆ ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ವಾಹನ ನಿಯಮಕ್ಕೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವದ ಅವಧಿ ವಿಸ್ತರಿಸಿರುವ ಮಾಹಿತಿಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಭಾನುವಾರ ತಿಳಿಸಿದೆ. 2020ರ ಫೆಬ್ರುವರಿ 1ರಿಂದ ಮಾನ್ಯತೆ ಅವಧಿ ಮುಕ್ತಾಯಗೊಂಡಿರುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ.
ಈ ವರ್ಷ ಮಾರ್ಚ್‌ನಿಂದ ಸಾರಿಗೆ ಸಚಿವಾಲಯವು ನಾಲ್ಕನೇ ಬಾರಿಗೆ ವಾಹನ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಿಸಿ ನಿರ್ದೇಶನ ನೀಡಿದೆ.
The validity of vehicular documents like DLs, RCs, Permits extended till 31st Mach 2021 in the light of need to prevent spread of COVID19. Ministry has today issued a directory to the States and Union Territory administrations in this regard: Ministry of Road Transport & Highways
— ANI (@ANI) December 27, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.