ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿಯಲ್ಲಿ ಮೋದಿ: 'ರುದ್ರಾಕ್ಷ' ಉದ್ಘಾಟನೆ ಸೇರಿ ₹1,500 ಕೋಟಿ ಯೋಜನೆಗಳಿಗೆ ಚಾಲನೆ

ಅಕ್ಷರ ಗಾತ್ರ

ವಾರಾಣಸಿ: ಜಪಾನಿಯರ ನೆರವಿನಿಂದ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಭಾ ಕೇಂದ್ರ 'ರುದ್ರಾಕ್ಷ' ಸೇರಿದಂತೆ ₹1,500 ಕೋಟಿ ಮೌಲ್ಯದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಪ್ರಧಾನಿ ಮೋದಿ ತಮ್ಮದೇ ಲೋಕಸಭಾ ಕ್ಷೇತ್ರವಾಗಿರುವ ಕಾಶಿಗೆ ಗುರುವಾರ ಭೇಟಿ ನೀಡಲಿದ್ದಾರೆ. ಮೋದಿ ಉದ್ಘಾಟಿಸಲಿರುವ ಯೋಜನೆಗಳ ಪೈಕಿ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಬೆಡ್‌ಗಳಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ(ಬಿಎಚ್‌ಯು), ಬಹು ಹಂತದ ಪಾರ್ಕಿಂಗ್‌, ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಮತ್ತು ಪ್ರವಾಸೋದ್ಯಮದ ಯೋಜನೆಗಳು ಸೇರಿವೆ.

ಜುಲೈ 15ರಂದು ಕಾಶಿಗೆ ಭೇಟಿ ನೀಡಲಿದ್ದು, ಸುಮಾರು ₹1,500 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ಈ ಯೋಜನೆಗಳಿಂದ ಕಾಶಿ ಮತ್ತು ಪೂರ್ವಾಂಚಲದ ಜನರ ಬದುಕು ಮತ್ತಷ್ಟು ಸುಲಭವಾಗಲಿದೆ ಎಂದು ಪಿಎಂ ಮೋದಿ ಟ್ವೀಟ್‌ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ವೈದ್ಯಕೀಯ ವಿಭಾಗದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅವುಗಳ ಜೊತೆಗೆ ಬಿಎಚ್‌ಯುನಲ್ಲಿ 100 ಬೆಡ್‌ನ ಎಂಸಿಎಚ್‌ ವಿಭಾಗವನ್ನು ಉದ್ಘಾಟಿಸಲಿದ್ದೇನೆ. ಕಾಶಿ ಮತ್ತು ಸುತ್ತಲಿನ ಇತರ ಪ್ರದೇಶದ ಜನರಿಗೆ ಈ ಯೋಜನೆಯಿಂದ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದು ಮೋದಿ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.

ಗೊದೌಲಿಯಾದಲ್ಲಿ ಬಹು ಹಂತದ ಪಾರ್ಕಿಂಗ್‌ ವ್ಯವಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿಗೆ ರೊ-ರೊ ವೆಸೆಲ್ಸ್‌, ವಾರಾಣಸಿ-ಘಾಜಿಪುರ್‌ ಹೆದ್ದಾರಿಯಲ್ಲಿ ಮೂರು ಲೇನ್‌ ಫ್ಲೈಓವರ್‌ ಬ್ರಿಡ್ಜ್‌ ಮತ್ತಿತರ ಯೋಜನೆಗಳಿಗೆ ಚಾಲನೆ ನೀಡುವುದಾಗಿ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT