ಗುರುವಾರ , ಅಕ್ಟೋಬರ್ 1, 2020
20 °C
ಈ ತಿಂಗಳ ಮೊದಲ ವಾರದಲ್ಲಿ 4,400ಕ್ಕೂ ಅಧಿಕ ಕಡತಗಳ ವಿಲೇವಾರಿ

ಸಭಾಪತಿಯಾಗಿ 4ನೇ ವರ್ಷಕ್ಕೆ ಕಾಲಿಟ್ಟ ವೆಂಕಯ್ಯ ನಾಯ್ಡು; ಬಾಕಿ ಕಡತಗಳ ವಿಲೇವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಂಕಯ್ಯ ನಾಯ್ಡು

ನವದೆಹಲಿ: ರಾಜ್ಯಸಭಾ ಸಭಾಪತಿಯಾಗಿ ಎಂ.ವೆಂಕಯ್ಯ ನಾಯ್ಡು ಮೂರು ವರ್ಷಗಳನ್ನು ಪೂರೈಸಿದ್ದಾರೆ. ವಿಶೇಷವೆಂಬಂತೆ ಮೇಲ್ಮನೆಯಲ್ಲಿ ಬಾಕಿ ಉಳಿದಿದ್ದ 4,400ಕ್ಕೂ ಅಧಿಕ ಕಡತಗಳನ್ನು ಅವರು ಆಗಸ್ಟ್‌ ಮೊದಲ ವಾರದಲ್ಲಿ ವಿಲೇವಾರಿ ಮಾಡಿದ್ದಾರೆ.

ತಾವು ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿಯಾಗಿ ಆಗಸ್ಟ್‌ 11ಕ್ಕೆ ಮೂರು ವರ್ಷ ಪೂರೈಸಲಿದ್ದು, ಇದರೊಳಗಾಗಿ ಬಾಕಿ ಇರುವ ಎಲ್ಲ ಕಡತಗಳನ್ನೂ ವಿಲೇವಾರಿ ಮಾಡಬೇಕು ಎಂದು ರಾಜ್ಯಸಭೆ ಕಾರ್ಯದರ್ಶಿಗಳಿಗೆ ವೆಂಕಯ್ಯ ನಾಯ್ಡು ಸೂಚನೆ ನೀಡಿದ್ದರು. ಈ ಕಾರಣದಿಂದ ಕಡತ ವಿಲೇವಾರಿಗೆ ಅಧಿಕಾರಿಗಳು ಚುರುಕು ನೀಡಿದ್ದರು. ಕೆಲ ಕಡತಗಳು 2007ರಿಂದಲೂ ಬಾಕಿ ಉಳಿದಿದ್ದವು ಎಂದು ಮೂಲಗಳು ತಿಳಿಸಿವೆ. 

ಸಭಾಪತಿ ಸೂಚನೆ ಕಾರಣದಿಂದ ಆಗಸ್ಟ್‌ ಮೊದಲ ವಾರದ ಎಂಟು ದಿನ ಉಳಿದೆಲ್ಲ ಕಡತಗಳ ವಿಲೇವಾರಿ ಮಾಡಿದರು. ಕೆಲ ಅಧಿಕಾರಿಗಳು ವಾರಾಂತ್ಯದಲ್ಲೂ ಬಂದು ಕೆಲಸ ಮಾಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ವಿಲೇವಾರಿಗೊಂಡ ಕಡತಗಳ ವಿವರ ಹಾಗೂ ಪರಿಹಾರ ನೀಡಿದ ಸಮಸ್ಯೆಗಳ ಕುರಿತು ಸಭಾಪತಿ ಕಚೇರಿಯು ಈಚೆಗೆ ಬಿಡುಗಡೆ ಮಾಡಿದೆ. 

ಪಿಡುಗಿನ ಅವಧಿಯಲ್ಲೂ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವೆಂಕಯ್ಯ ನಾಯ್ಡು ಅವರು, 70ಕ್ಕೂ ಅಧಿಕ ಸಾರ್ವಜನಿಕ ಸಮಾರಂಭ, 14 ಪದವಿ ಪ್ರದಾನ ಸಮಾರಂಭಗಳಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ್ದರು. ‘ಮಿಷನ್‌ ಕನೆಕ್ಟ್‌’ ಎಂಬ ಹೆಸರಿನಡಿ ರಾಜ್ಯಸಭೆಯ ಎಲ್ಲ ಸದಸ್ಯರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸೇರಿದಂತೆ 1,600ಕ್ಕೂ ಅಧಿಕ ಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂವಾದ ನಡೆಸಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು