ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂದನಿ ಚೌಕ್‌ನ ಹನುಮ ದೇಗುಲ ನೆಲಸಮ: ಭಜರಂಗದಳ, ವಿಎಚ್‌ಪಿಯಿಂದ ಪ್ರತಿಭಟನೆ, ಬಂಧನ

Last Updated 5 ಜನವರಿ 2021, 10:50 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಚಾಂದನಿ ಚೌಕ್‌ನಲ್ಲಿರುವ ಹನುಮಾನ್‌ ದೇಗುಲವನ್ನು ನೆಲಸಮಗೊಳಿಸಲಾಗಿದ್ದು, ಇದನ್ನು ವಿರೋಧಿಸಿ ಪ್ರತಿಭಟಿಸಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಉತ್ತರ ದೆಹಲಿ ಮಹಾನಗರ ಪಾಲಿಕೆಯು ಹನುಮಾನ್‌ ದೇವಸ್ಥಾನವನ್ನು ಭಾನುವಾರ ನೆಲಸಮಗೊಳಿಸಿತ್ತು. ಚಾಂದನಿ ಚೌಕ್‌ ಸುಂದರೀಕರಣ ಯೋಜನೆಗಾಗಿ ದೇಗುಲವನ್ನು ನೆಲಸಮಗೊಳಿಸುವಂತೆ ನ್ಯಾಯಾಲಯವು ಆದೇಶಿಸಿತ್ತು.

ಪ್ರತಿಭಟನಕಾರರು ಗೌರಿ ಶಂಕರ್‌ ಮಂದಿರದಿಂದ ಹನುಮಾನ್‌ ದೇಗುಲವಿದ್ದ ಸ್ಥಳದವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಅವರನ್ನು ತಡೆದಿದ್ದಾರೆ.

‘ವಿಎಚ್‌ಪಿಯ ದೆಹಲಿ ಘಟಕದ ಅಧ್ಯಕ್ಷ ಕಪಿಲ್ ಖನ್ನಾ, ಉಪಾಧ್ಯಕ್ಷ ಸುರೇಂದ್ರ ಗುಪ್ತಾ, ಕಾರ್ಯದರ್ಶಿ ರವಿಜೀ ಮತ್ತು ಭಜರಂಗದಳದ ಕಾರ್ಯಕರ್ತ ಭರಾರ್ ಬಾತ್ರಾ ಸೇರಿದಂತೆ ಸುಮಾರು 15ರಿಂದ 20 ಕಾರ್ಯಕರ್ತರು ಮತ್ತು ಮುಖಂಡರನ್ನು ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ವಿಎಚ್‌ಪಿ ವಕ್ತಾರ ಮಹೇಂದ್ರ ರಾವತ್ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT