ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳನ್ನು ನಿಯಂತ್ರಣದಿಂದ ಮುಕ್ತಗೊಳಿಸುವ ಕಾನೂನು ಜಾರಿಗೊಳಿಸಿ: ವಿಎಚ್‌ಪಿ

Last Updated 28 ನವೆಂಬರ್ 2021, 3:53 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸರ್ಕಾರದ ನಿಯಂತ್ರಣದಿಂದ ಸ್ವತಂತ್ರಗೊಳಿಸುವ ಕಾನೂನು ಜಾರಿಗೆ ತರುವಂತೆ ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ದೇಶದಲ್ಲಿ ಕಾನೂನುಬಾಹಿರ ಮತಾಂತರವನ್ನು ತಡೆಯುವ ಬಲವಾದ ಕಾನೂನನ್ನು ಜಾರಿಗೊಳಿಸುವಂತೆಯೂ ಅದು ಕೇಂದ್ರಕ್ಕೆ ಮನವಿ ಮಾಡಿದೆ.

ಹಿಂದೂ ಸಮಾಜದ ನಿರ್ವಹಣೆಯಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ಪರ್ಯಾಯ ನಿಯಂತ್ರಣ ಕ್ರಮಗಳನ್ನು ರೂಪಿಸಲು ಸಲಹೆಗಳನ್ನು ಪಡೆಯುವ ಸಂಬಂಧ ವಿಹಿಂಪ ಕೇಂದ್ರೀಯ ನಾಯಕರನ್ನು ಹೊಂದಿರುವ ಸಮಿತಿ ಹಿಂದೂ ಧರ್ಮದ ದಾರ್ಶನಿಕರು ಮತ್ತು ಸಂತರನ್ನು ಭೇಟಿಯಾಗಲಿದೆ. ಈ ಸಮಿತಿಯು ವಿಹಿಂಪನ ಕೇಂದ್ರ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಸಂಘಟನಾ ಕಾರ್ಯದರ್ಶಿ (ದಕ್ಷಿಣ ಭಾರತ) ಪಿ.ಎಂ.ನಾಗರಾಜನ್ ಮತ್ತಿತರನ್ನು ಒಳಗೊಂಡಿದೆ.

ಹಿಂದೂ ಭಕ್ತರು ಪ್ರಶಾಂತತೆ ಮತ್ತು ಪವಿತ್ರ ಭಾವನೆ ಹೊಂದಲು ದೇವಾಲಯಗಳಿಗೆ ಭೇಟಿ ನೀಡಿ ಕೊಡುಗೆಗಳನ್ನು ನೀಡುತ್ತಾರೆ. ಇದರಿಂದಾಗಿಯೇ ದೇವಸ್ಥಾನಗಳು ನಿರ್ವಹಿಸುವ ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸೇವೆಗಳು, ಹಬ್ಬಗಳು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಸೂಕ್ತ ರೀತಿಯಲ್ಲಿ ಜರುಗುತ್ತವೆ. ವಿಪರ್ಯಾಸವೆಂದರೆ ರಾಜ್ಯ ಸರ್ಕಾರಗಳು ದೇಶದ ಕೆಲವು ಶ್ರೀಮಂತ ದೇವಾಲಯಗಳ ಮತ್ತು ಭಕ್ತರ ಕಾಣಿಕೆಗಳನ್ನುತರ್ಕವಿಲ್ಲದೆ ಮತ್ತು ಅನಿಯಂತ್ರಿತವಾಗಿ ಖರ್ಚು ಮಾಡುತ್ತವೆ ಎಂದು ವಿಹಿಂಪದ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT