ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Punjab Assembly Elections 2022: ಪಂಜಾಬ್‌ನಲ್ಲಿ ಶಾಂತಿಯುತ ಮತದಾನ

Last Updated 20 ಫೆಬ್ರುವರಿ 2022, 6:13 IST
ಅಕ್ಷರ ಗಾತ್ರ

ಅಮೃತಸರ: ಪಂಜಾಬ್ ವಿಧಾನಸಭೆಗೆ ಇಂದು (ಭಾನುವಾರ) ಶಾಂತಿಯುತವಾಗಿಮತದಾನ ನಡೆಯುತ್ತಿದೆ. 117 ಕ್ಷೇತ್ರಗಳಿಗೆಒಂದೇ ಹಂತದಲ್ಲಿ ಮತದಾನ ಜರುಗುತ್ತಿದೆ.

1,304 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.14 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಕಾಂಗ್ರೆಸ್, ಎಎಪಿ, ಎಸ್‌ಎಡಿ–ಬಿಎಸ್‌ಪಿ ಮೈತ್ರಿಕೂಟ, ಬಿಜೆಪಿ–ಪಿಎಲ್‌ಸಿ–ಎಸ್‌ಎಡಿ (ಸಂಯುಕ್ತ) ಮೈತ್ರಿಕೂಟದ ಜೊತೆಗೆ ರೈತ ಸಂಘಟನೆಗಳ ವೇದಿಕೆಯಾದ ಸಂಯುಕ್ತ ಸಮಾಜ ಮೋರ್ಚಾ ಈ ಬಾರಿಯ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಗದ್ದುಗೆ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವಧಿಯಲ್ಲಿ ಪೆಟ್ರೋಲ್ ಹಾಗೂ ವಿದ್ಯುತ್ ದರಗಳನ್ನು ಕಡಿಮೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಪ್ರಬಲ ಎದುರಾಳಿ ಎಂದು ಪರಿಗಣಿತವಾಗಿರುವ ಆಮ್ ಆದ್ಮಿ ಪಕ್ಷವು ದೆಹಲಿ ಮಾದರಿ ಆಡಳಿತವನ್ನು ಮುಂದಿಟ್ಟುಕೊಂಡು ಪಂಜಾಬ್‌ ಗದ್ದುಗೆ ಏರಲು ಹವಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆದ್ದಿದ್ದ ಎಎಪಿ, ಇತ್ತೀಚೆಗೆ ನಡೆದ ಚಂಡೀಗಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು.

ಕೃಷಿ ಕಾಯ್ದೆ ವಿಚಾರವಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಜೊತೆಗಿನ ಸಂಬಂಧ ಕಡಿದುಕೊಂಡಿದ್ದ ಶಿರೋಮಣಿ ಅಕಾಲಿದಳವು ಬಿಎಸ್‌ಪಿ ಜೊತೆ ಕಣಕ್ಕಿಳಿದಿದೆ. ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಚುನಾವಣೆಗೆ ಸಜ್ಜಾಗಿರುವ ಪಕ್ಷವು ತನ್ನನ್ನು ‘ಪಂಜಾಬ್‌ನ ಸ್ವಂತ ಪಕ್ಷ’ ಎಂದು ಬಿಂಬಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT