ಶುಕ್ರವಾರ, ಏಪ್ರಿಲ್ 16, 2021
31 °C

ತೆಲಂಗಾಣ ವಿಧಾನಪರಿಷತ್‌ನ 2 ಸ್ಥಾನಗಳಿಗೆ ಮತದಾನ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ತೆಲಂಗಾಣ ವಿಧಾನಪರಿಷತ್ತಿನ ಎರಡು ಪದವೀಧರರ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್‌ ಅವರ ಪುತ್ರಿ ಎಸ್‌.ವಾಣಿ ದೇವಿ ಅವರು ಟಿಆರ್‌ಎಸ್‌ ಪಕ್ಷದಿಂದ ಸ್ಪರ್ಧಿಸಿದ್ದು ಒಟ್ಟು 163 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್‌ ಮತ್ತು ವಾರಂಗಲ್-ಖಮ್ಮಮ್-ನಲ್ಗೊಂಡ ಪದವೀಧರರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನವು ಸಂಜೆ 4 ಗಂಟೆ ತನಕ ನಡೆಯಲಿದೆ. ಈ ಕ್ಷೇತ್ರಗಳಿಗಾಗಿ ಟಿಆರ್‌ಎಸ್‌, ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳು ಬಿರುಸಿನ ಪ್ರಚಾರ ಮಾಡಿದ್ದವು. 

ಈ ತಿಂಗಳ 17ರಂದು ಮತ ಎಣಿಕೆ ನಡೆಯಲಿದೆ.

ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್‌ ಕ್ಷೇತ್ರದಲ್ಲಿ ವಾಣಿ ದೇವಿ ಸೇರಿದಂತೆ ಒಟ್ಟು 93 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ವಾರಂಗಲ್-ಖಮ್ಮಮ್-ನಲ್ಗೊಂಡ ಕ್ಷೇತ್ರಕ್ಕಾಗಿ 71 ಅಭ್ಯರ್ಥಿಗಳು ಸೆಣಸಾಡುತ್ತಿದ್ದಾರೆ.

ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ದೊಡ್ಡ ಗಾತ್ರದ ಮತಪತ್ರಗಳನ್ನು ಮತ್ತು ಮತ ಪಟ್ಟಿಗೆಗಳನ್ನು ಬಳಸಲಾಗಿದೆ. ಈ ಚುನಾವಣೆಗಾಗಿ 1,530 ಮತಗಟ್ಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಪದವೀಧರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಮೆಹಬೂಬ ನಗರ–ರಂಗಾರೆಡ್ಡಿ–ಹೈದರಾಬಾದ್‌ ಕ್ಷೇತ್ರದಲ್ಲಿ ವಾಣಿ ದೇವಿ(ಟಿಆರ್‌ಎಸ್‌), ಎನ್‌. ರಾಮಚಂದರ್ ರಾವ್ (ಬಿಜೆಪಿ), ಜಿ.ಚಿನ್ನ ರೆಡ್ಡಿ (ಕಾಂಗ್ರೆಸ್‌), ಎಲ್.ರಮಣ ಮತ್ತು ಕೆ.ನಾಗೇಶ್ವರ್‌ (ಟಿಡಿಪಿ)ಸ್ಪರ್ಧಿಸುತ್ತಿದ್ಧಾರೆ. ವಾರಂಗಲ್-ಖಮ್ಮಮ್-ನಲ್ಗೊಂಡದಿಂದ ಪಲ್ಲಾ ರಾಜೇಶ್ವರ ರೆಡ್ಡಿ(ಟಿಆರ್‌ಎಸ್‌), ಜಿ. ಪ್ರೇಮೆಂದರ್‌ ರೆಡ್ಡಿ(ಬಿಜೆಪಿ), ಎಂ.ಕೋಡಂದರಂ(ಟಿಜೆಎಸ್) ಸ್ಪರ್ಧಿಸುತ್ತಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು