ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಮೂರು ತಿಂಗಳ ಸುದೀರ್ಘ ಅಂತರದ ನಂತರ ತೆರೆದ ಜಿಮ್‌, ಯೋಗ ಕೇಂದ್ರಗಳು

Last Updated 28 ಜೂನ್ 2021, 11:13 IST
ಅಕ್ಷರ ಗಾತ್ರ

ನವದೆಹಲಿ: ಮೂರು ತಿಂಗಳ ಸುದೀರ್ಘ ಅಂತರದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಜಿಮ್‌ಗಳು ಮತ್ತು ಯೋಗ ಕೇಂದ್ರಗಳನ್ನು ಸೋಮವಾರ ತೆರೆಯಲಾಗಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಪ್ಪಿಸಲು ಈ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದೀಗ ಶೇ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ದೆಹಲಿ ಸರ್ಕಾರ ಅವಕಾಶ ನೀಡಿದೆ.

ಜಿಮ್-ಮಾಲೀಕರು ಮತ್ತು ತರಬೇತುದಾರರು ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಆಗಾಗ್ಗೆ ಸ್ವಚ್ಛಗೊಳಿಸುವುದು ಮತ್ತು ಸಮಯ ನಿಗದಿ ಒಳಗೊಂಡಂತೆ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಅವಕಾಶ ನೀಡುವ ಯೋಜನೆಗಳನ್ನು ರೂಪಿಸಿದ್ದಾರೆ.

ನಗರದಲ್ಲಿ ಕೋವಿಡ್-19 ಪರಿಸ್ಥಿತಿಯು ಸುಧಾರಣೆಯಾದ ನಂತರ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯ ಅಡಿಯಲ್ಲಿ 50 ಜನರ ಮಿತಿಯೊಂದಿಗೆ ಔತಣಕೂಟ, ಮದುವೆ ಸಭಾಂಗಣಗಳು ಮತ್ತು ಹೋಟೆಲ್‌ಗಳಲ್ಲಿ ಸರ್ಕಾರವು ಮದುವೆಗೆ ಅವಕಾಶ ನೀಡಿದೆ.

ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಫಿಟ್‌ನೆಸ್ ಉದ್ಯಮವನ್ನು ಮತ್ತೆ ತೆರೆಯುವ ಅವಕಾಶ ನೀಡಿರುವುದನ್ನು ಸ್ವಾಗತಿಸಿದೆ ಎಂದು ದೆಹಲಿ ಜಿಮ್ ಅಸೋಸಿಯೇಶನ್ ಉಪಾಧ್ಯಕ್ಷ ಚಿರಾಗ್ ಸೇಥಿ ಹೇಳಿದ್ದಾರೆ.

'ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ 16 ಸ್ಲಾಟ್‌ಗಳಲ್ಲಿ ಸುಮಾರು 50-60 ಜಿಮ್ ಸದಸ್ಯರಿಗೆ ಬರಲು ಅವಕಾಶ ನೀಡಲಾಗುತ್ತದೆ. ಕೋವಿಡ್-19 ವಿರುದ್ಧ ಹೋರಾಡಲು ಆರೋಗ್ಯವಾಗಿರುವುದು ಮುಖ್ಯ ಎಂದು ಅರಿತುಕೊಂಡಿರುವುದರಿಂದ ಜನರು ಜಿಮ್‌ಗಳಿಗೆ ಹಿಂತಿರುಗುವ ಬಗ್ಗೆ ಉತ್ಸುಕರಾಗಿದ್ದಾರೆ' ಎಂದು ಮಾಲ್ವಿಯಾ ನಗರದ ಎನಿಟೈಮ್ ಫಿಟ್‌ನೆಸ್‌ನ ಮಾಲೀಕರೂ ಆಗಿರುವ ಸೇಥಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

'ಲಸಿಕೆ ಹಾಕಿಸಿಕೊಂಡಿರುವ ಸದಸ್ಯರಿಗೆ ನಾವು ರಿಯಾಯಿತಿ ಕೊಡುಗೆಗಳನ್ನು ಸಹ ನೀಡುತ್ತಿದ್ದೇವೆ. ನಾವು ಪ್ರತಿ ಸಲಕರಣೆಗಳ ಪಕ್ಕದಲ್ಲಿ ಸ್ಯಾನಿಟೈಸರ್ ಬಾಟಲ್ ಮತ್ತು ಬಟ್ಟೆಯನ್ನು ಇರಿಸಿದ್ದೇವೆ. ಆದ್ದರಿಂದ ಅದನ್ನು ಬಳಸುವ ಯಾರಾದರೂ ಅದನ್ನು ಸ್ವಚ್ಛಗೊಳಿಸಬಹುದು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT