ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಶುಕ್ರವಾರದಂದು ರಸ್ತೆಯೊಂದು ಕೊಚ್ಚಿಹೋಗಿ ನದಿಯಲ್ಲಿ ಲೀನವಾಗಿರುವ ಘಟನೆ ವರದಿಯಾಗಿದೆ.

ಕಳೆದ 48 ತಾಸಿನಿಂದ ಡೆಹ್ರಾಡೂನ್‌ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆ ಭಾರಿ ಅನಾಹುತ ಉಂಟಾಗಿದೆ.

ಇದನ್ನೂ ಓದಿ:ಅರುಣಾಚಲದಲ್ಲಿ ಭಾರಿ ಮಳೆ, ಪ್ರವಾಹ; ಬೃಹತ್ ಪ್ರಮಾಣದ ಹಾನಿ

ಮಾಲ್‌ದೇವತಾ-ಸಹಸ್ರಧಾರ ಸಂಪರ್ಕ ನದಿಯ ರಸ್ತೆಯು ನೀರಿನ ರಭಸಕ್ಕೆ ಹಲವು ಮೀಟರ್‌ಗಳಷ್ಟು ಕೊಚ್ಚಿ ಹೋಗಿದೆ.

ಡೆಹ್ರಾಡೂನ್ ಜಿಲ್ಲಾಡಳಿತದ ಪ್ರಕಾರ ಈ ಘಟನೆಯು ಖೇರಿ ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿದುಕೊಂಡಿದೆ.

ಪ್ರವಾಹದ ರಭಸದಲ್ಲಿ ಕೆಲವು ವಾಹನಗಳು ಕೊಚ್ಚಿ ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ.

ಡೆಹ್ರಾಡೂನ್‌ನಲ್ಲಿ ಸೋಮವಾರದಿಂದ ನಿರಂತರ ಮಳೆಯಾಗುತ್ತಿದ್ದು, ಹಲವು ಕಡೆ ಜಲಾವೃತವಾಗಿದೆ. ನದಿಗಳು ಉಕ್ಕಿ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.