ಶನಿವಾರ, ಜುಲೈ 2, 2022
26 °C

ನಾವು ನರಕದ ಹಾದಿಯಲ್ಲಿದ್ದೇವೆ: ಜಹಾಂಗಿರ್‌ಪುರಿ ಕಾರ್ಯಾಚರಣೆಗೆ ಚಿದಂಬರಂ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಗಲಭೆ ಪೀಡಿತ ಜಹಾಂಗಿರ್‌ಪುರಿಯಲ್ಲಿ ಹಲವು ಕಟ್ಟಡಗಳನ್ನು ನೆಲಸಮಗೊಳಿಸಿರುವ ಸ್ಥಳೀಯ ಪಾಲಿಕೆಯ ತೆರವು ಕಾರ್ಯಾಚರಣೆ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಕಿಡಿಕಾರಿದ್ದಾರೆ.

‘ಕಾನೂನು ಸುವ್ಯವಸ್ಥೆಯು ಪ್ರತಿದಿನವೂ ಕುಸಿಯುವುದನ್ನು ನಾವು ನೋಡುತ್ತಿದ್ದೇವೆ. ಶೀಘ್ರದಲ್ಲೇ ದೇಶದಲ್ಲಿ ಯಾವುದೇ ಕಾನೂನು, ಯಾವುದೇ ನಿಯಮಗಳಿರುವುದಿಲ್ಲ’ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಆಡಳಿತದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಅತಿಕ್ರಮಣ ತೆರವು ಕಾರ್ಯಾಚರಣೆಯ ಭಾಗವಾಗಿ ಬುಧವಾರ ಬೆಳಿಗ್ಗೆ ಮಸೀದಿಯ ಸಮೀಪವಿರುವ ಹಲವಾರು ಕಾಂಕ್ರೀಟ್ ಕಟ್ಟಡಗಳು ಮತ್ತು ತಾತ್ಕಾಲಿಕ ಶೆಡ್‌ಗಳನ್ನು ನೆಲಸಮಗೊಳಿಸಲಾಯಿತು.

ಇದನ್ನೂ ಓದಿ.. ಜಹಾಂಗೀರ್‌ಪುರಿಯಲ್ಲಿ ನೆಲಸಮ ಕಾರ್ಯಾಚರಣೆ; ಯಂತ್ರಕ್ಕೆ ಅಡ್ಡನಿಂತ ಬೃಂದಾ ಕಾರಟ್

ಕಾರ್ಯಾಚರಣೆ ವಿರುದ್ಧ ಜಮಿಯತ್ ಉಲೇಮಾ-ಎ-ಹಿಂದ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತೆರವು ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿತ್ತು.

‘ಒಮ್ಮೆ ನಿರಂಕುಶ ಆದೇಶಗಳು ಕಾನೂನನ್ನು ಅತಿಕ್ರಮಿಸಿದರೆ, ನಾವು ನರಕದ ಹಾದಿಯಲ್ಲಿರುತ್ತೇವೆ. ಬುಲ್ಡೋಜರ್ ಅನಿಯಂತ್ರಿತ ಆದೇಶವನ್ನು ಪ್ರತಿನಿಧಿಸುತ್ತದೆ. ಸುಪ್ರೀಂ ಕೋರ್ಟ್ 'ಕಾನೂನು' ಪ್ರತಿನಿಧಿಸುತ್ತದೆ. ನಿನ್ನೆ, ಬುಲ್ಡೋಜರ್ ಕಾನೂನನ್ನು ಧಿಕ್ಕರಿಸಿರುವುದನ್ನು ನಾವು ನೋಡಿದ್ದೇವೆ. ಇಂದು ಏನಾಗುತ್ತದೆ ಎಂಬುದನ್ನು ನೋಡೋಣ’ ಎಂದು ಮಾಜಿ ಗೃಹ ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು