ಬರುಯ್‌ಪುರ್(ಪಶ್ಚಿಮ ಬಂಗಾಳ): ಹಳ್ಳಿಯ ಜಾತ್ರೆಯಲ್ಲಿ ಬಲೂನಿಗೆ ಗಾಳಿ ತುಂಬಲು ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 4 ಮಂದಿ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

ಕೋಲ್ಕತ್ತದಿಂದ 50 ಕಿ.ಮೀ ದೂರದ ಜೊಯ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಂತ್ರಾ ಹಳ್ಳಿಯಲ್ಲಿ ಭಾನುವಾರ ರಾತ್ರಿ 10.10ರ ಸುಮಾರಿಗೆ ಘಟನೆ ನಡೆದಿದೆ.

ಬಲೂನುಗಳಿಗೆ ಗಾಳಿ ತುಂಬಲು ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತರನ್ನು ಸಚಿನ್ ಮೊಲ್ಲಾ (13), ಕುತುಬುದ್ದೀನ್ ಮಿಸ್ತ್ರೀ (35), ಅಬಿರ್ ಘಜಿ (8) ಮತ್ತು ಬಲೂನ್ ವ್ಯಾಪಾರಿ, ಮುಚಿರಾಮ್ ಮೊಂಡಲ್ (35) ಎಂದು ಗುರ್ತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.