ಕೋಲ್ಕತ್ತ: ಇಲ್ಲಿನ ಆವೆಮಣ್ಣಿನ ಮಾದರಿಕಾರರೊಬ್ಬರು 100 ಅಡಿಯ ಭಗವಾನ್ ಬುದ್ಧನ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದು, ಇದು ದೇಶದಲ್ಲೇ ಅತಿ ದೊಡ್ಡದಾದ ಬುದ್ಧನ ವಿಗ್ರಹ ಎನ್ನಲಾಗಿದೆ.

ಮುಂದಿನ ವರ್ಷ ಬೋಧ್ಗಯಾದ ದೇವಸ್ಥಾನವೊಂದರಲ್ಲಿ ಇದು ಪ್ರತಿಷ್ಠಾಪನೆ ಆಗಲಿದೆ. ಬಾರಾನಗರದ ಘೋಷ್ಪಾರಾ ಪ್ರದೇಶದಲ್ಲಿರುವ ಮೈದಾನವೊಂದರಲ್ಲಿ ಫೈಬರ್ಗ್ಲಾಸ್ ಬಳಸಿ ಈ ಪ್ರತಿಮೆಯನ್ನು ತಯಾರಿಸಲಾಗುತ್ತಿದೆ.

ಮುಂಬರುವ ಬುದ್ಧ ಪೂರ್ಣಿಮೆಯ ಮೊದಲು ಈ ಬೃಹತ್ ಪ್ರತಿಮೆಯನ್ನು ‘ಬುದ್ಧ ಇಂಟರ್ನ್ಯಾಷನಲ್ ವೆಲ್ಫೇರ್ ಮಿಷನ್’ ದೇವಸ್ಥಾನದಲ್ಲಿ ಅಳವಡಿಸಲಿದೆ. ಬಿಡಿ ಬಿಡಿಯಾಗಿ ಪ್ರತಿಮೆಯನ್ನು ತಯಾರಿಸಲಾಗುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳು ಬೇಕು. ಈ ಭಾಗಗಳನ್ನು ಬೋಧ್ಗಯಾಗೆ ತೆಗೆದುಕೊಂಡು ಹೋಗಿ ಅಲ್ಲಿ ಜೋಡಿಸಲಾಗುವುದು ಎಂದು ಕಲಾವಿದರಾದ ಮಿಂತು ಪಾಲ್ ಗುರುವಾರ ತಿಳಿಸಿದ್ದಾರೆ.

2015ರಲ್ಲಿ ಪಾಲ್ 80 ಅಡಿ ಎತ್ತರದ ದುರ್ಗೆಯ ಮೂರ್ತಿಯನ್ನು ತಯಾರಿಸಿದ್ದರು. ಇದು ವಿಶ್ವದಲ್ಲೇ ಅತಿ ಎತ್ತರದ ದುರ್ಗೆಯ ವಿಗ್ರಹ ಎಂದು ಖ್ಯಾತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.