ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧ್ಯವಾದರೆ ನಮ್ಮನ್ನು ತಡೆಯಿರಿ: ಬಿಜೆಪಿಗೆ ಟಿಎಂಸಿ ನಾಯಕ ಡೆರೆಕ್‌ ಸವಾಲು

Last Updated 3 ಏಪ್ರಿಲ್ 2021, 9:15 IST
ಅಕ್ಷರ ಗಾತ್ರ

ಕೋಲ್ಕತ್ತ:ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಪಕ್ಷವು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸೋಲು ಕಾಣಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಟಿಎಂಸಿ ನಾಯಕ ಡೆರೆಕ್‌‌ ಓʼಬ್ರಿಯಾನ್‌, ಸಾಧ್ಯವಾದರೆ ನಮ್ಮನ್ನು ತಡೆಯಿರಿ ಎಂದುಸವಾಲು ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡೆರೆಕ್‌,ʼಮೋದಿ-ಶಾ ಅವರಮೈಂಡ್‌ ಗೇಮ್‌ನಿಂದ ನಾನು ಮನರಂಜನೆ ಪಡೆದಿದ್ದೇನೆ.ಒಟ್ಟಾರೆ 2019ರ ಲೋಕಸಭಾ ಚುನಾವಣೆಯಲ್ಲಿ, ಪ್ರವಾಸಿ ಗ್ಯಾಂಗ್‌ನ ಎಲ್ಲಾ ದೊಡ್ಡ ಹೇಳಿಕೆಗಳ ನಡುವೆಯೂ ಟಿಎಂಸಿಗೆ ಶೇ. 3 ರಷ್ಟು ಲಾಭವಾಗಿತ್ತು. ಆ ಮುನ್ನಡೆಯನ್ನು ಟಿಎಂಸಿ 2021ರಲ್ಲಿ ಗಣನೀಯವಾಗಿಹೆಚ್ಚಿಸಿಕೊಂಡಿದೆ. ಹಾಗಾಗಿ, ನಿಮ್ಮಿಂದ ಸಾಧ್ಯವಾದರೆ ನಮ್ಮನ್ನು ತಡೆಯಿರಿʼ ಎಂದು ಸವಾಲು ಹಾಕಿದ್ದಾರೆ.

ʼಮೋ-ಶಾ ಮತ್ತು ಬಿಜೆಪಿ ಅಧ್ಯಕ್ಷರು ಬಂಗಾಳದಲ್ಲಿನ ಸ್ಥಿತಿಗತಿಯ ಅವಲೋಕನ ಮಾಡಿದ್ದಾರೆ. ಮೊದಲೆರಡು ಹಂತದ ಮತದಾನದ ಬಳಿಕ ರಾಜ್ಯದಲ್ಲಿ ತಮ್ಮ ಪಕ್ಷದ ಸ್ಥಿತಿಕಠೋರವಾಗಿದೆ ಎಂಬುದನ್ನು ಮನಗಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿಯೇ ಅವರು ಮೈಂಡ್‌ ಗೇಮ್‌ ತಂತ್ರ ಬಳಸುತ್ತಿದ್ದಾರೆ. ಆದಾರೂ, ಅದಾವುದೂನಡೆಯುವುದಿಲ್ಲʼ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಟಿಎಂಸಿಯು ಉಳಿದೆಲ್ಲ ಪಕ್ಷಗಳಿಗಿಂತ ಶೇ. 6 ರಷ್ಟು ಲಾಭ ಗಳಿಸಿದೆ ಎಂದೂ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರಿಗೆ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲುವ ಭೀತಿ ಎದುರಾಗಿದ್ದು, ಮತ್ತೊಂದು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಎಂದುಜೆ.ಪಿ. ನಡ್ಡಾ ಅವರು ಇಂದು ಹೇಳಿಕೆ ನೀಡಿದ್ದರು.ಆ ಬಗ್ಗೆಯೂ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ, ʼನಾವು ನಂದಿಗ್ರಾಮವನ್ನು ಗೆದ್ದಿದ್ದೇವೆ. ಮತ್ತೊಂದು ಕ್ಷೇತ್ರ ಎಂಬುದು ಇಲ್ಲ. ಇದು ಬಿಜೆಪಿಯ ಮೈಂಡ್‌ ಗೇಮ್‌ʼ ಎಂದು ತಿಳಿಸಿದ್ದಾರೆ.

ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಎದುರು ಈ ಹಿಂದೆ ಅವರ ಆಪ್ತರೇ ಆಗಿದ್ದ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರವೂ ಸೇರಿದಂತೆ ಒಟ್ಟು30 ಕ್ಷೇತ್ರಗಳಿಗೆ ಗುರುವಾರ ಎರಡನೇ ಹಂತದ ಮತದಾನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT