ಮಂಗಳವಾರ, ಸೆಪ್ಟೆಂಬರ್ 28, 2021
23 °C

ಮರಣ ನೋಂದಣಿ ವ್ಯವಸ್ಥೆಯಿಂದ ಕೋವಿಡ್‌ ಸಾವಿನ ಸಂಖ್ಯೆ ಕೈತಪ್ಪದು: ಆರೋಗ್ಯ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ‘ದೇಶದಲ್ಲಿ ದೃಢವಾದ ಮತ್ತು ವ್ಯವಸ್ಥಿತ ಮರಣ ನೋಂದಣಿ ವ್ಯವಸ್ಥೆ ಇರುವುದರಿಂದ ಕೋವಿಡ್‌ನಿಂದಾದ ಮರಣ ಪ್ರಕರಣಗಳು ಲೆಕ್ಕಕ್ಕೆ ಸಿಗದಿರುವುದು ಸಂಪೂರ್ಣ ಅಸಂಭವ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸ್ಪಷ್ಟಪಡಿಸಿದೆ.

ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ, ದೇಶದಾದ್ಯಂತ ಆರೋಗ್ಯ ವ್ಯವಸ್ಥೆಯು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಕರಣಗಳ ಪರಿಣಾಮಕಾರಿ ವೈದ್ಯಕೀಯ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿತ್ತು. ಇದರಿಂದಾಗಿ ಕೋವಿಡ್ ಮರಣಗಳ ಸರಿಯಾದ ವರದಿ ಮತ್ತು ದಾಖಲೀಕರಣದಲ್ಲಿ ವಿಳಂಬವಾಗಿರಬಹುದು. ಆದರೆ ಅದನ್ನು ನಂತರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮರುಹೊಂದಾಣಿಕೆ ಮಾಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮರಣ ಸಂಖ್ಯೆಯ ಮರುಹೊಂದಾಣಿಕೆಯನ್ನು ಈಗಲೂ ನಡೆಸಲಾಗುತ್ತಿದೆ. ಇದು ಕೋವಿಡ್ -19ರಿಂದ ಉಂಟಾದ ಮರಣಗಳ ವರದಿ ಮತ್ತು ಕಡಿಮೆ ಎಣಿಕೆಯ ಎಲ್ಲ ಊಹೆಗಳನ್ನು ನಿವಾರಿಸುತ್ತದೆ ಎಂದು ಅದು ಹೇಳಿದೆ.

‘2020ರ ಡಿಸೆಂಬರ್ 31ರ ವೇಳೆಗೆ ಸಾವಿನ ಪ್ರಮಾಣ ಶೇ 1.45 ರಷ್ಟಿತ್ತು, 2021ರ ಏಪ್ರಿಲ್-ಮೇನಲ್ಲಿ ಎರಡನೇ ಅಲೆ ಅನಿರೀಕ್ಷಿತವಾಗಿ ಏರಿಕೆಯಾದಾಗಲೂ ಸಾವಿನ ಪ್ರಮಾಣ ಈಗಲೂ ಶೇ 1.34ರಷ್ಟಿದೆ’ ಎಂದು ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು