ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ದೇವರ ನಿಂದನೆ ಪೋಸ್ಟ್ ಹಾಕಿದರೂ ನಿರ್ಬಂಧವಿಲ್ಲ ಏಕೆ: ಟ್ವಿಟರ್‌ಗೆ ಹೈಕೋರ್ಟ್

ಹಿಂದೂ ದೇವರ ನಿಂದನೀಯ ಪೋಸ್ಟ್ ಹಾಕಿದರೂ ನಿರ್ಬಂಧವಿಲ್ಲ ಏಕೆ: ಹೈಕೋರ್ಟ್
Last Updated 28 ಮಾರ್ಚ್ 2022, 16:24 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಪದೇ ಪದೆ ನಿಂದನೆಯ ವಿಚಾರಗಳನ್ನು ಪೋಸ್ಟ್ ಮಾಡುವ ಬಳಕೆದಾರರನ್ನು ನಿರ್ಬಂಧಿಸದಿರುವ ಬಗ್ಗೆ ದೆಹಲಿ ಹೈಕೋರ್ಟ್ ಸೋಮವಾರ ಟ್ವಿಟರ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಪಂಚದ ಇತರ ಜನರ ಭಾವನೆಗಳು ಮತ್ತು ಧರ್ಮದ ಬಗ್ಗೆ ಟ್ವಿಟರ್ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ವಿಪಿನ್ ಸಂಘಿ ನೇತೃತ್ವದ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಟ್ವಿಟರ್ ಮೂಲಕ ಹಲವಾರು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ವಕೀಲ ಆದಿತ್ಯ ದೇಶವಾಲ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸಿತು. ಹಲವಾರು ದೂರುಗಳ ಹೊರತಾಗಿಯೂ, Atheist Republic ಹೆಸರಿನ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿಲ್ಲ ಅಥವಾ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಿಲ್ಲ ಎಂದು ದೂರಲಾಗಿದೆ.

'ಪೋಸ್ಟ್ ಮಾಡಿರುವ ವಿಚಾರ ನಿಮಗೆ ಸಂವೇದನಾಶೀಲ ಎನಿಸಿದರೆ ನೀವು ಅದನ್ನು ನಿರ್ಬಂಧಿಸುತ್ತಿದ್ದಿರಿ. ಆದರೆ, ಇತರ ಜನಾಂಗಗಳು ಅಥವಾ ಇತರ ಪ್ರದೇಶಗಳ ಜನರ ಬಗ್ಗೆ ನಿಮಗೆ ಸಂವೇದನಾಶೀಲತೆ ಇಲ್ಲ. ಒಂದು ವೇಳೆ ಇತರ ಧರ್ಮಗಳ ವಿರುದ್ಧ ಅದೇ ರೀತಿಯ ಕೆಲಸವನ್ನು ಮಾಡಿದ್ದರೆ ನೀವು ಹೆಚ್ಚು ಗಂಭೀರವಾಗಿರುತ್ತಿದ್ದಿರಿ' ಎಂದು ಪೀಠ ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಟ್ವಿಟರ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, ನ್ಯಾಯಾಲಯ ಅಥವಾ ಸರ್ಕಾರದ ಆದೇಶವಿಲ್ಲದೆ ಯಾವುದೇ ವೈಯಕ್ತಿಕ ಖಾತೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಅಮಾನತುಗೊಳಿಸಿದೆ ಎಂದು ನ್ಯಾಯಾಲಯ ಟ್ವಿಟರ್ ಗಮನಸೆಳೆಯಿತು.

ಖಾತೆಗಳನ್ನು ನಿರ್ಬಂಧಿಸಲು ಕೇಂದ್ರ ಮತ್ತು ಟ್ವಿಟರ್ ನಡುವೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಇದೆ ಎಂದು ಕೇಂದ್ರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಎಸ್‌ಒಪಿ ಪ್ರಕಾರ, 60 ದಿನಗಳ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಸಂದೇಶಗಳು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಖಾತೆಯನ್ನು ಅಮಾನತುಗೊಳಿಸಬಹುದು ಎಂದು ಕೇಂದ್ರದ ಪರವಾಗಿ ಹಾಜರಾಗಿದ್ದ ವಕೀಲ ಹರೀಶ್ ವೈದ್ಯನಾಥನ್ ಶಂಕರ್ ತಿಳಿಸಿದರು.

'ಇದೇ ನಿಮ್ಮ ಮಾನದಂಡ ಆಗಿದ್ದರೆ, ನೀವು ಟ್ರಂಪ್ ಅವರನ್ನು ಏಕೆ ನಿರ್ಬಂಧಿಸಿದ್ದೀರಿ?' ಎಂದು ಪೀಠ ಪ್ರಶ್ನಿಸಿತು.

Atheist Republic ಪರವಾಗಿ ವಕೀಲೆ ವೃಂದಾ ಭಂಡಾರಿ ವಾದ ಮಂಡಿಸಿದರು.

ವಾದವಿವಾದಗಳನ್ನು ಆಲಿಸಿದ ನಂತರ, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 6 ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT