ನವದೆಹಲಿ: ‘ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ತೋರುವಷ್ಟು ಉತ್ಸಾಹವನ್ನು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಏಕೆ ತೋರುತ್ತಿಲ್ಲ‘ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಕೇಳಿದ್ದಾರೆ.

ಕೋವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ದೇಶದಾದ್ಯಂತ ಆತಂಕ ಸೃಷ್ಟಿಯಾಗಿದ್ದರೂ ಈ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷ್ಯಿಸಿರುವ ಪ್ರಧಾನಿಯವರು, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆಯ ರ‍್ಯಾಲಿಗಳಲ್ಲಿ ಭಾಷಣ ಮಾಡುತ್ತಿದ್ದಾರೆ ಎಂದು ಸಿಬಲ್ ಆಕ್ಷೇಪಿಸಿದ್ದಾರೆ.

‘ಮೋದಿಯವರೇ, ಚುನಾವಣೆಗಳನ್ನು ಗೆಲ್ಲಲು ನಿಮ್ಮ ಎಲ್ಲ ಶಕ್ತಿ, ಸಾಮರ್ಥ್ಯ, ಶ್ವಾಸಕೋಶದ ಸಾಮರ್ಥ್ಯ, ಸಂಪನ್ಮೂಲ ಗಳನ್ನು ಬಳಸುತ್ತಿದ್ದೀರಿ. ಆದರೆ, ನಮ್ಮ ದೇಶದ ಜನರನ್ನು ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅದೇ ಉತ್ಸಾಹವನ್ನು ಯಾಕೆ ತೋರುತ್ತಿಲ್ಲ‘ ಎಂದು ಸಿಬಿಲ್ ಟ್ವೀಟ್‌ನಲ್ಲಿ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.