ಬುಧವಾರ, ಸೆಪ್ಟೆಂಬರ್ 22, 2021
21 °C

ಗಾಯಗಳಿಲ್ಲ, ಗುಂಡೇಟಿಲ್ಲ: ಕಾಡಾನೆ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನಗೋಡು/ಹುಣಸೂರು: ಗುರುಪುರ ಬಳಿಯ ಎನ್.ವಿಲೇಜ್ ಎಂಬಲ್ಲಿ 25ರಿಂದ 30 ವರ್ಷದ ಮಕನ ಆನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ.

ಗುರುಪುರ ಗ್ರಾಮದ ಬಳಿಯ ಎನ್.ವಿಲೇಜ್‌ನಲ್ಲಿನ ಟಿಬೆಟ್‌ ನಿವಾಸಿ ಹೋಂಡಾ ಅವರಿಗೆ ಸೇರಿದ ಜಮೀನಿನಲ್ಲಿ ಮಕನ ಆನೆ ತಂತಿ ಬೇಲಿಗೆ ಹೊಂದಿಕೊಂಡಂತೆ ಬಿದ್ದು ಮೃತಪಟ್ಟಿದೆ.

ಅರಣ್ಯ ಇಲಾಖೆಯ ಎಸಿಎಫ್ ಸತೀಶ್, ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ನಮನ ನಾರಾಯಣ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಆನೆ ಮೈ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಗುಂಡು ಹೊಡೆದಿರುವ ಗಾಯವೂ ಇಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಬಗ್ಗೆ ಖಚಿತ ಪಡಿಸಿಕೊಳ್ಳಲು ಸಾಧ್ಯ’ ಎಂದು ಎಸಿಎಫ್‌ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪಶುವೈದ್ಯಾಧಿಕಾರಿ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು