ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದ ದಾಳಿಯಿಂದ ತಮಿಳು ಸಂಸ್ಕೃತಿಯ ರಕ್ಷಣೆ: ರಾಹುಲ್ ಗಾಂಧಿ

Last Updated 23 ಜನವರಿ 2021, 5:16 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೂರು ದಿನಗಳ ತಮಿಳುನಾಡು ಪ್ರವಾಸ ಇಂದಿನಿಂದ (ಶನಿವಾರ) ಆರಂಭಗೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳುನಾಡು ಸಂಸ್ಕೃತಿಯನ್ನು ರಕ್ಷಿಸಲು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತಮಿಳುನಾಡು ಭೇಟಿ ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ. ಇತ್ತೀಚೆಗಷ್ಟೇ ತಮಿಳರ ಹೊಸ ವರ್ಷ 'ಪೊಂಗಲ್' ಹಬ್ಬದ ಪ್ರಯುಕ್ತ ನಡೆದ 'ಜಲ್ಲಿಕಟ್ಟು' ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು.

ಈ ಮೂಲಕ ತಿಂಗಳೊಂದರಲ್ಲೇ ಎರಡನೇ ಬಾರಿಗೆ ತಮಿಳುನಾಡು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಕುರಿತು ವಿಶೇಷ ವಿಡಿಯೊವನ್ನು ಹಂಚಿದ್ದಾರೆ.

ತಮಿಳುನಾಡಿಗೆ ಮತ್ತೊಮ್ಮೆ ಹಿಂತಿರುಗಲು ನನಗೆ ಸಂತಸವಾಗುತ್ತಿದೆ. ಕೊಂಗು ನಾಡಿನ ನನ್ನ ತಮಿಳು ಸಹೋದರ ಹಾಗೂ ಸಹೋದರಿಯೊಂದಿಗೆ ಸಮಯ ಕಳೆಯಲಿದ್ದೇನೆ. ನಾವೆಲ್ಲರೂ ಒಟ್ಟಾಗಿ, ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಲಿದ್ದೇವೆ ಎಂದು ಟ್ವೀಟ್ ಮಾಡಿದರು.

'ಕೊಂಗು ರಾಜ್ಯ' ತಮಿಳುನಾಡಿನ ಪಶ್ಚಿಮ ಭಾಗದ ಪ್ರದೇಶವನ್ನೊಳಗೊಂಡ ಪ್ರಾಚೀನ ರಾಜ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT