ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಡಣವೀಸ್‌ ಪತ್ನಿಗೆ ಲಂಚದ ಆಮಿಷ: ವಸ್ತ್ರ ವಿನ್ಯಾಸಕಿ ಬಂಧನ

Last Updated 17 ಮಾರ್ಚ್ 2023, 12:38 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪತ್ನಿ ಅಮೃತಾ ಫಡಣವೀಸ್‌ ಅವರಿಗೆ ಕ್ರಿಮಿನಲ್ ಪ್ರಕರಣದಲ್ಲಿ ನೆರವಾಗುವಂತೆ ಲಂಚ ನೀಡಲು ಯತ್ನಿಸಿ, ಪರೋಕ್ಷ ಬೆದರಿಕೆಯೊಡ್ಡಿದ ಆರೋಪದಲ್ಲಿ ವಸ್ತ್ರ ವಿನ್ಯಾಸಕಿ ಅನಿಷ್ಕಾಳನ್ನು ಬಂಧಿಸಲಾಗಿದ್ದು, ಮಾ.21ರವರೆಗೆ ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.


ಅಮೃತಾ ಅವರು ನೀಡಿದ ದೂರು ಆಧರಿಸಿ, ವಸ್ತ್ರ ವಿನ್ಯಾಸಕಿ ಅನಿಷ್ಕಾ ಮತ್ತು ಆಕೆಯ ತಂದೆಯ ವಿರುದ್ಧ ಕಳೆದ ಫೆಬ್ರುವರಿ 20ರಂದು ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು.


ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಆರೋಪಿಯನ್ನು 7 ದಿನಗಳ ಕಾಲ ವಶಕ್ಕೆ ನೀಡಬೇಕೆಂದು ಪೊಲೀಸ್‌ ಪರ ವಕೀಲರು ವಾದಿಸಿದರು. ಬಳಿಕ ನ್ಯಾಯಾಲಯ ಆರೋಪಿಯನ್ನು ಮಾ.21ರವರೆಗೆ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿತು.


ಅನಿಷ್ಕಾ ಅವರನ್ನು 2021ರಲ್ಲಿ ಮೊದಲ ಸಲ ಭೇಟಿಯಾಗಿದ್ದಾಗಿ ಅಮೃತಾ ಫಡಣವೀಸ್‌ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT