ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2026ಕ್ಕೆ ಜೊಜಿಲಾ ಸುರಂಗಮಾರ್ಗ ಸಿದ್ಧ: ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮ

Last Updated 27 ಸೆಪ್ಟೆಂಬರ್ 2021, 18:40 IST
ಅಕ್ಷರ ಗಾತ್ರ

ಸೋನಾಮಾರ್ಗ್ (ಜಮ್ಮು-ಕಾಶ್ಮೀರ): ಏಷ್ಯಾದ ಅತ್ಯಂತ ಉದ್ದದ ಮತ್ತು ಅತಿ ಎತ್ತರದಲ್ಲಿರುವ ಜೊಜಿಲಾ ಸುರಂಗ ಮಾರ್ಗವು 2026ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರಕ್ಕೆ ಅವಕಾಶವಿರುವ ಈ ಸುರಂಗಮಾರ್ಗವು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತದ ನಡುವೆ ಸಂಪರ್ಕವನ್ನು ಸುಲಭಗೊಳಿಸುತ್ತದೆ.

ಜೊಜಿಲಾ ಪಾಸ್‌ನಲ್ಲಿ ಚಳಿಗಾಲದ ನಂತರವೂ 20 ಅಡಿ ಎತ್ತರದಷ್ಟು ಹಿಮ ಬಿದ್ದಿರುತ್ತದೆ. ಆಗ ರಸ್ತೆ ಸಂಚಾರ ಸಾಧ್ಯವೇ ಇಲ್ಲ. ಈ ಸುರಂಗಮಾರ್ಗವು ಕಾರ್ಯಾರಂಭ ಮಾಡಿದರೆ, ಈ ತೊಂದರೆ ಇಲ್ಲದಂತಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಕಾರಿ ನಿರ್ದೇಶಕ ಜಿ.ಎಸ್‌.ಕಾಂಬೊ ಹೇಳಿದ್ದಾರೆ.

ದ್ವಿಮುಖ ಸಂಚಾರ ವ್ಯವಸ್ಥೆ ಇರುವ ಈ ಸುರಂಗ ಮಾರ್ಗದ ನಿರ್ಮಾಣ ಕಾರ್ಯವನ್ನು ಅತ್ಯಂತ ವೇಗವಾಗಿ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT