ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿಯ ದೃಢ ನಂಬಿಕೆಯಿಂದಾಗಿ ಭಾರತದ ಕಡೆಗೆ ಜಗತ್ತು: ಮೋಹನ್ ಭಾಗವತ್

Last Updated 3 ಅಕ್ಟೋಬರ್ 2021, 2:29 IST
ಅಕ್ಷರ ಗಾತ್ರ

ಜಮ್ಮು: ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಜೀವನಶೈಲಿಯಲ್ಲಿ ತನ್ನ ದೃಢವಾದ ನಂಬಿಕೆಯನ್ನಿಟ್ಟಿರುವ ಭಾರತಕ್ಕಾಗಿ ವಿಶ್ವವು ಎದುರು ನೋಡುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ತಿಳಿಸಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಭಾರತವು ಹಲವು ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಹೊಂದಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ದೇಶಗಳು ಇದನ್ನು ಒತ್ತಿ ಹೇಳುತ್ತಿವೆ. ಈಗ ವಿಶ್ವವು ಈ ನಂಬಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಅಭ್ಯಾಸಕ್ಕಾಗಿ ಭಾರತದತ್ತ ನೋಡುತ್ತಿದೆ' ಎಂದು ಅವರು ಹೇಳಿದರು.

'ಆರ್ಟಿಕಲ್ 370 ಅನ್ನು ರದ್ದುಗೊಳಿಸಿರುವ ಬಗ್ಗೆ ಮಾತನಾಡಿದ ಅವರು, 'ವ್ಯವಸ್ಥೆ ಬದಲಾಗಿದೆ ... ಆದರೆ ಅದು ಹೃದಯದಿಂದ ದೂರ ಹೋಗಿದೆಯೇ? ಕಾವೇರಿ ನದಿ ನೀರಿನ ಸಮಸ್ಯೆಯಂತೆ ರಾಜ್ಯಗಳು ಏಕೆ ಪರಸ್ಪರರ ವಿರುದ್ಧ ಹೋರಾಡುತ್ತವೆ? ವ್ಯವಸ್ಥೆಯನ್ನು ಬದಲಾಯಿಸುವುದರಿಂದ ಯಾವ ಒಳ್ಳೆಯದನ್ನು ಸಾಧಿಸಬಹುದು? ಮನಸ್ಥಿತಿ ಕೂಡ ಬದಲಾಗಬೇಕು' ಎಂದು ಅವರು ಹೇಳಿದರು.

ಅದೇನೇ ಇದ್ದರೂ, ಶ್ಯಾಮ ಪ್ರಸಾದ್ ಮುಖರ್ಜಿಯವರ ತ್ಯಾಗವು 370ನೇ ವಿಧಿಯ ರದ್ದತಿಯ ರೂಪದಲ್ಲಿ ಫಲ ನೀಡುತ್ತಿರುವುದನ್ನು ನೋಡಿದ ಸಂತೋಷವು ದೇಶದಲ್ಲಿ ಸಾಕಷ್ಟು ಗೋಚರಿಸುತ್ತಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯಗಳ ಹೊರತಾಗಿಯೂ ಭಾರತೀಯರು ಒಗ್ಗಟ್ಟಾಗಿದ್ದಾರೆ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.

'ನಾವೆಲ್ಲ ಒಂದೇ. ವಿವಿಧ ಪ್ರದೇಶಗಳು, ಧರ್ಮಗಳು ಮತ್ತು ನಂಬಿಕೆಗಳ ಆಧಾರದಲ್ಲಿ ನಾವು ವಿಭಿನ್ನ ವ್ಯವಸ್ಥೆಗಳನ್ನು ಹೊಂದಿರಬಹುದು. ಈ ದೇಶದಲ್ಲಿ ಹಲವಾರು ಪ್ರದೇಶಗಳು ಮತ್ತು ರಾಜ್ಯಗಳನ್ನು ಹೊಂದಿದ್ದೇವೆ. ನಾವು ವಿಭಿನ್ನ ಆಚರಣೆಗಳು ಮತ್ತು ನಂಬಿಕೆಗಳನ್ನು ಹೊಂದಿದ್ದೇವೆ. ನಮ್ಮಲ್ಲಿ ಬೇರೆ ಬೇರೆ ದೇವರುಗಳು ಮತ್ತು ದೇವತೆಗಳು ಇದ್ದಾರೆ ಆದರೆ ಈ ಎಲ್ಲಾ ವೈವಿಧ್ಯತೆಗಳು ನಮ್ಮ ಏಕತೆಯನ್ನು ಬದಲಿಸುವುದಿಲ್ಲ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT