ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಲ್ಲಿ ಕೊಳೆಯಲಿ: ರಾಜ್‌ ಕುಂದ್ರಾಗೆ ಯೂಟ್ಯೂಬ್‌ ಸ್ಟಾರ್‌ ಶಾಪ ಹಾಕಿದ್ದೇಕೆ?

ಅಕ್ಷರ ಗಾತ್ರ

ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುವಂತೆ ಉದ್ಯಮಿ ರಾಜ್‌ ಕುಂದ್ರಾ ಅವರು ತಮಗೆ ನೇರ ಸಂದೇಶ ಕಳುಹಿಸಿದ್ದರು ಎಂದು ಯೂಟ್ಯೂಬ್‌ ಸ್ಟಾರ್‌ ಪುನೀತ್‌ ಕೌರ್‌ ಆರೋಪಿಸಿದ್ದಾರೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ವಿಡಿಯೊಗಳನ್ನು ಕೌರ್‌ ಹಂಚಿಕೊಂಡಿದ್ದಾರೆ. ವಿಡಿಯೊಗಳಲ್ಲಿ ಕೌರ್‌ ಜೊತೆ ಇಬ್ಬರು ವ್ಯಕ್ತಿಗಳು ನೇರ ಸಂದೇಶಗಳನ್ನು ಪರಿಶೀಲಿಸುತ್ತಿರುವ ದೃಶ್ಯಗಳು ಕಂಡುಬಂದಿದೆ. ಈ ವಿಚಾರವಾಗಿ ಬರೆದುಕೊಂಡಿರುವ ಕೌರ್‌, 'ಬ್ರೋಸ್‌, ನೇರ ಸಂದೇಶ ಹೊಂದಿದ್ದ ವಿಡಿಯೊ ಪರಿಶೀಲನೆ ಮಾಡಿದ್ದನ್ನು ನೀವು ನೆನಪಿಸಿಕೊಳ್ಳುತ್ತಿದ್ದಾರಾ? ಅಲ್ಲಿ ರಾಜ್‌ ಕುಂದ್ರಾ ಹಾಟ್‌ ಶಾಟ್‌ಗಾಗಿ ನನ್ನನ್ನು ಸಂಪರ್ಕಿಸಿದ್ದರು' ಎಂದು ತಿಳಿಸಿದ್ದಾರೆ.

ಮುಂದುವರೆದ ಅವರು, 'ರಾಜ್‌ ಕುಂದ್ರಾನಿಂದ ನೇರ ಸಂದೇಶವೊಂದು ಬಂದಾಗ ಅದನ್ನು ನಾವು ಸ್ಪ್ಯಾಮ್‌ ಎಂದು ಭಾವಿಸಿದ್ದೆವು. ಈ ಮನುಷ್ಯ ನಿಜವಾಗಿಯೂ ಜನರಿಗೆ ಆಮಿಷವೊಡ್ಡುತ್ತಿದ್ದಾನೆ. ಈಗ ಅವನು ಜೈಲಿನಲ್ಲಿ ಕೊಳೆಯಲಿ' ಎಂದು ಹೇಳಿದ್ದಾರೆ.

ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಮತ್ತು ಆ್ಯಪ್‌ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಸ್ಥಳೀಯ ನ್ಯಾಯಾಲಯ ಜುಲೈ 23ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ರಾಜ್‌ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಪೊಲೀಸರು ಮತ್ತೊಬ್ಬ ಆರೋಪಿ ರಿಯಾನ್‌ ಜಾನ್‌ನನ್ನು ಬಂಧಿಸಿದ್ದು ಆತನನ್ನು ಜುಲೈ 23ರವರೆಗೂ ನ್ಯಾಯಾಲಯ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಕುಂದ್ರಾ ಹಾಗೂ ರಿಯಾನ್‌ನನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT