ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹ ಎಂದರೆ ಆಹಾ ಎನ್ನುವಂತಿರಬೇಕು

Last Updated 13 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಚಹ ಕುಡಿಯುವ ಅಭ್ಯಾಸವಿರುವವರನ್ನು ಕೇಳಿ ನೋಡಿ, ಯಾವಾಗಲೂ ನೀವು ಮಾಡುವ ಚಹದ ರುಚಿ ಒಂದೇ ರೀತಿಯಾಗಿರುತ್ತದೆಯೇ ಎಂದು. ‘ಕೆಲವೊಮ್ಮೆ ರುಚಿ ಹೆಚ್ಚು ಕಡಿಮೆಯಾಗುತ್ತದೆ. ನಾವೇ ತಯಾರಿಸಿದ್ದೇವಲ್ಲ ಎಂದುಕೊಂಡು ಕುಡಿಯುವುದು ಅಷ್ಟೆ’ ಎಂಬ ಉತ್ತರ ಬರುತ್ತದೆ. ತಮ್ಮ ಜೀವಮಾನದಲ್ಲಿ ಸಾವಿರಾರು ಕಪ್‌ ಚಹ ತಯಾರಿಸಿದವರೂ ಕೂಡ ಸರಿಯಾಗಿ ಚಹ ತಯಾರಿಸುವುದು ಕಡಿಮೆಯೇ. ಬಿಸಿ ನೀರಿಗೆ ಚಹದ ಎಲೆಗಳನ್ನು ಹಾಕಿ ಕುದಿಸಿ, ಅದಕ್ಕೊಂದಿಷ್ಟು ಹಾಲು ಸುರುವಿ, ಸಕ್ಕರೆ ಸೇರಿಸಿ ಕುಡಿಯುವುದು ಅಥವಾ ಹಾಲಿಗೇ ನೇರವಾಗಿ ಚಹದ ಪುಡಿ ಹಾಕಿ ಕುದಿಸಿ ಸೇವಿಸುವುದು ಅಥವಾ ಬಿಸಿ ನೀರಿನಲ್ಲಿ ಟೀಬ್ಯಾಗ್‌ ಅದ್ದಿ ಡಿಪ್‌ಚಾಯ್‌ ಮಾಡಿಕೊಂಡು ಕುಡಿಯುವುದು ಅಥವಾ ಬ್ಲ್ಯಾಕ್‌ ಟೀ ತಯಾರಿಸಿ ಸಿಪ್‌ ಮಾಡುವುದು... ಹೀಗೆ ಎಷ್ಟೋ ಬಗೆಯಲ್ಲಿ ಚಹ ತಯಾರಿಸಿ ಸವಿಯಬಹುದು.

ಬೆಳಗಿನ ಖಡಕ್‌ ಚಹ ಕುಡಿಯಬೇಕಾದರೆ ಕೆಲವೊಂದು ತಪ್ಪುಗಳನ್ನು ಮಾಡದೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಿಂದಿನ ದಿನ ಕುದಿಸಿ ಆರಿಸಿದ ನೀರನ್ನು ಮತ್ತೆ ಕುದಿಸಿ ಅದರಿಂದ ಚಹ ತಯಾರಿಸಿದರೆ ಸಪ್ಪೆ ಎನಿಸುತ್ತದೆ ಎನ್ನುತ್ತಾರೆ ಈ ವಿಷಯದಲ್ಲಿ ಅನುಭವಿಗಳು. ಯಾವಾಗಲೂ ತಾಜಾ ತಣ್ಣಗಿನ ನೀರನ್ನು, ಸಾಧ್ಯವಿದ್ದರೆ ಫಿಲ್ಟರ್‌ ನೀರನ್ನು ಕುದಿಸಲು ಇಡಿ. ಇದಕ್ಕೆ ಕಾರಣ ಒಮ್ಮೆ ಕುದಿಸಿದ ನೀರಲ್ಲಿ ಆಮ್ಲಜನಕದ ಅಂಶ ಕಡಿಮೆ ಇರುತ್ತದೆ. ಹೀಗಾಗಿ ತಣ್ಣೀರಿನಲ್ಲಿರುವ ಆಮ್ಲಜನಕ ಚಹದ ಪರಿಮಳ, ರುಚಿ ಹೆಚ್ಚಿಸಲು ನೆರವಾಗುತ್ತದೆ.

ಹಾಲನ್ನು ಮೊದಲೇ ಸೇರಿಸಿ. ನೀರನ್ನು ಕುದಿಸಿ ಅದಕ್ಕೆ ಚಹದ ಪುಡಿ ಸೇರಿಸಿದರೆ ಅದರಲ್ಲಿರುವ ಟ್ಯಾನಿನ್‌ ಚಹಕ್ಕೆ ರುಚಿ, ಪರಿಮಳ ನೀಡುತ್ತದೆ. ಹಾಗೆಯೇ ಜೊತೆಗೆ ಹಾಲನ್ನೂ ಸೇರಿಸಿ. ಹಾಲಿನಲ್ಲಿರುವ ಪ್ರೊಟೀನ್‌ ಟ್ಯಾನಿನ್‌ ಹಾಗೂ ನೀರಿನಲ್ಲಿರುವ ಇತರ ಖನಿಜಾಂಶಗಳ ಜೊತೆ ಸೇರಿಕೊಂಡು ರುಚಿಕಟ್ಟಾದ ಚಹ ಸಿದ್ಧವಾಗುತ್ತದೆ.

ಚಹದ ಪುಡಿ ಅಥವಾ ಟೀ ಬ್ಯಾಗ್‌ ಮೇಲೆ ಬಿಸಿ ನೀರು ಸುರಿವಿದರೆ ಚಹ ಸುಟ್ಟಂತಾಗಿ ಒಳ್ಳೆಯ ರುಚಿ ಬರುವುದಿಲ್ಲ. ಅದರ ಬದಲು ಕುದಿಸುವುದು ಸೂಕ್ತ.

ಹಾಗೆಯೇ ಚಹ ತಿರುವುವಾಗ ಸ್ಟೀಲ್‌ ಚಮಚ ಬಳಸಿ. ಅದರ ಬದಲು ಅಲ್ಯೂಮೀನಿಯಂ ಅಥವಾ ಬೆಳ್ಳಿಯ ಚಮಚ ಬಳಸಿದರೆ ಒಂದು ರೀತಿಯ ಲೋಹದ ರುಚಿ ಸೇರಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT