ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹಸ್ಯ ಗುಂಡಿಯಲ್ಲಿತ್ತು 13.50 ಕ್ವಿಂಟಲ್ ಗಾಂಜಾ!

ಬೆಂಗಳೂರು ಪೊಲೀಸರ ಕಾರ್ಯಾಚರಣೆ l ಒಡಿಶಾದಿಂದ ಬರುತ್ತಿದ್ದ ಡ್ರಗ್ಸ್
Last Updated 10 ಸೆಪ್ಟೆಂಬರ್ 2020, 18:56 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರು, ಪ್ರಕರಣವೊಂದರ ಬೆನ್ನುಬಿದ್ದು ಕಲಬುರ್ಗಿಯ ಕುರಿ ಸಾಕಾಣಿಕಾ ಕೇಂದ್ರದ (ಫಾರ್ಮ್‌) ರಹಸ್ಯ ಗುಂಡಿಯಲ್ಲಿ ಬಚ್ಚಿಟ್ಟಿದ್ದ 13.50 ಕ್ವಿಂಟಲ್ 300 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಗುರುವಾರ ನಾಲ್ವರನ್ನು ಬಂಧಿಸಿದ್ದಾರೆ.

ಗಾಯತ್ರಿನಗರದ ಜ್ಞಾನಶೇಖರ್ (37), ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಿದ್ದುನಾಥ್ ಲಾವಟೆ (22), ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗನಾಥ್ (39) ಹಾಗೂ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಚಂದ್ರಕಾಂತ್ (34) ಬಂಧಿತರು.

‘ಆಟೊ ಚಾಲಕ ಜ್ಞಾನಶೇಖರ್, ಶೇಷಾದ್ರಿಪುರದ ವಿ.ವಿ. ಗಿರಿ ಕಾಲೊನಿಯ ಮೈದಾನದಲ್ಲಿ ಇತ್ತೀಚೆಗೆ ಗಾಂಜಾ ಮಾರುತ್ತಿದ್ದ. ಆತ
ನನ್ನು ಬಂಧಿಸಿ 2 ಕೆ.ಜಿ 100 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿತ್ತು. ಆತ ನೀಡಿದ್ದ ಮಾಹಿತಿಯಿಂದಲೇ ಗಾಂಜಾ ಮಾರಾಟ ಜಾಲ ಪತ್ತೆ ಮಾಡಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದರು.

ಕಾದು ಹಿಡಿದ ಪೊಲೀಸರು: ‘ಬೆಂಗಳೂರಿ ನಲ್ಲಿ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಜ್ಞಾನಶೇಖರ್, ಮತ್ತೊಬ್ಬ ಆರೋಪಿ ಸಿದ್ದುನಾಥ್ ಲಾವಟೆ ಎಂಬಾತನ ಬಳಿ ಗಾಂಜಾ ಖರೀದಿಸಿ ತರು ತ್ತಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಇನ್‌ಸ್ಪೆಕ್ಟರ್‌ ಎಂ.ಎಲ್.ಕೃಷ್ಣಮೂರ್ತಿ ನೇತೃತ್ವದ ತಂಡ, ಸೆ. 6ರಂದು ಮಾದ
ನಾಯಕನಹಳ್ಳಿ ಬಳಿ ಸಿದ್ದುನಾಥ್‌ನನ್ನು ಬಂಧಿಸಿತ್ತು’ ಎಂದು ಅನುಚೇತ್‌ ಹೇಳಿದರು.

ಒಡಿಶಾ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಗಾಂಜಾವನ್ನು ಖರೀದಿಸಿ ತಂದು ಕಲಬುರ್ಗಿ ಮತ್ತು ಬೀದರ್‌ನಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಸಂಗತಿ ಸಿದ್ದುನಾಥ್‌ನಿಂದ ಗೊತ್ತಾಯಿತು. ಇನ್‌ಸ್ಪೆಕ್ಟರ್ ನೇತೃತ್ವದ ತಂಡ, ಕಲಬುರ್ಗಿ ಹಾಗೂ ಬೀದರ್‌ಗೆ ಹೋಗಿ ಚಂದ್ರಕಾಂತ್ ಹಾಗೂ ನಾಗನಾಥ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು’ ಎಂದು ಅವರು ಹೇಳಿದರು.

ರಹಸ್ಯಗುಂಡಿಯಲ್ಲಿಗಾಂಜಾ: ಆರೋಪಿ ಚಂದ್ರಕಾಂತ್, ಕಾಳಗಿ ತಾಲ್ಲೂಕಿನ ಲಚ್ಚು ನಾಯಕ ತಾಂಡಾ ಬಳಿ ಕುರಿ ಫಾರ್ಮ್‌ ಮಾಡಿದ್ದ. ಆದರೆ, ಅಲ್ಲಿ ಕುರಿ ಸಾಕುತ್ತಿರಲಿಲ್ಲ. ಬದಲಿಗೆರಹಸ್ಯಗುಂಡಿಯೊಂದನ್ನು ತೆಗೆಸಿ ಅದರಲ್ಲಿಗಾಂಜಾಪೊಟ್ಟಣಗಳನ್ನು ಬಚ್ಚಿಟ್ಟಿದ್ದ’ ಎಂದೂ ಅನುಚೇತ್ ವಿವರಿಸಿದರು.

ತರಕಾರಿ ಜತೆಗಾಂಜಾ: ‘ಗೂಡ್ಸ್ ವಾಹನಗಳ ಮೂಲಕ ಆರೋಪಿಗಳು ಒಡಿಶಾದಿಂದಗಾಂಜಾತರಿಸುತ್ತಿದ್ದರು.ಗಾಂಜಾಪೊಟ್ಟಣ ಕೆಳಗೆ ಇಟ್ಟು, ಅದರ ಮೇಲೆ ತರಕಾರಿ ಬುಟ್ಟಿಗಳನ್ನು ಜೋಡಿಸುತ್ತಿದ್ದರು. ಚೆಕ್‌ಪೋಸ್ಟ್‌ನಲ್ಲಿ ವಾಹನ ತಡೆದು ತಪಾಸಣೆ ಮಾಡುತ್ತಿದ್ದ ಪೊಲೀಸರು, ತರಕಾರಿ ನೋಡಿ, ವಾಹನ ತೆರಳಲು ಸೂಚಿಸುತ್ತಿದ್ದರು ’
ಎಂದರು.

30 ಎಕರೆ ಜಮೀನಿನ ಮಾಲೀಕ

ಆರೋಪಿ ಸಿದ್ದುನಾಥ್ ಲಾವಟೆ, 30 ಎಕರೆಗೂ ಅಧಿಕ ಜಮೀನು ಹೊಂದಿದ್ದಾನೆ. ಊರಿನಲ್ಲಿ ಆತನನ್ನು ಸಾಹುಕಾರ್ ಎಂದೇ ಜನ ಕರೆಯುತ್ತಿದ್ದರು. ಇನ್ನೊಬ್ಬ ಆರೋಪಿ ನಾಗನಾಥ್, ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಫೈನಾನ್ಸ್ ವ್ಯವಹಾರವನ್ನೂ ಮಾಡುತ್ತಿದ್ದ.

ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ

ಜಾಲದ ಪ್ರಮುಖ ಆರೋಪಿಗಳ ಪತ್ತೆಗೆ ಸಿನಿಮೀಯ ರೀತಿಯಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹೈಗ್ರೌಂಡ್ಸ್ ಠಾಣೆಯ ಪಿಎಸ್‌ಐಗಳಾದ ನಬಿಸಾಬ್, ಭೀಮಸೇನ್ ಘಾಟಕೆ ಹಾಗೂ ಸಿಬ್ಬಂದಿ, ಗ್ರಾಹಕರ ಸೋಗಿನಲ್ಲಿ ಆರೋಪಿಗಳನ್ನು ಸಂಪರ್ಕಿಸಿದ್ದರು. ‘1 ಕೆ.ಜಿ. ಗಾಂಜಾಕ್ಕೆ ₹12 ಸಾವಿರ ಕೊಡುತ್ತೇವೆ. 100 ಕೆ.ಜಿ. ಗಾಂಜಾ ಬೇಕಾಗಿದೆ’ ಎಂದಿದ್ದರು.

ಪೊಲೀಸರನ್ನು ಬೀದರ್‌ಗೆ ಕರೆಸಿಕೊಂಡಿದ್ದ ಆರೋಪಿಗಳು, ಗಾಂಜಾ ಇದ್ದ ಜಾಗ ತೋರಿಸದೇ ಸುತ್ತಾಡಿಸಿದ್ದರು. ಕೊನೆಯಲ್ಲಿ ತೆಲಂಗಾಣದ ಕಾಂಗ್ಟಿ ಎಂಬ ಹಳ್ಳಿಗೆ ಹೋಗುವಂತೆ ಹೇಳಿದ್ದರು. ಅಲ್ಲಿಗೆ ಪೊಲೀಸರು ಹೋದಾಗ, ‘ಹೊರ ರಾಜ್ಯಕ್ಕೆ ಗಾಂಜಾ ಕೊಡುವುದಿಲ್ಲ’ ಎಂದು ಮಾರಾಟಗಾರರು ಹೇಳಿದ್ದರು. ವಾಪಸು ಬಂದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT