ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 24 ಗಂಟೆಯಲ್ಲಿ 20 ಮಂದಿ ಸಾವು, ಸಾವಿನ ಪ್ರಮಾಣ ಏರಿಕೆ

Last Updated 9 ಮೇ 2021, 19:31 IST
ಅಕ್ಷರ ಗಾತ್ರ

ಚಾಮರಾಜನಗರ: ಮೇ 2ರ ದುರಂತದಿಂದಾಗಿ ತೀವ್ರ ಆತಂಕಕ್ಕೆ ಒಳಗಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿಕೋವಿಡ್‌ ಸಾವಿನ ಸಂಖ್ಯೆ ಹೆಚ್ಚುತ್ತಲೇಇದ್ದು, ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಸಂಜೆ 6 ಗಂಟೆಯವರೆಗೆ 20ಸೋಂಕಿತರುಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 910 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

ಮೇ 4ರಂದು 8, 5ರಂದು 8, 6ರಂದು 14, 7ರಂದು 9, 8ರಂದು 5 ಹಾಗೂ 9ರಂದುಸಂಜೆ6 ಗಂಟೆವರೆಗೆ 20 ಮಂದಿ ಮೃತಪಟ್ಟಿದ್ದಾರೆ. ಮೇ 2ರಂದು ಆಮ್ಲಜನಕದವ್ಯತ್ಯಯ ಹಾಗೂ ಇನ್ನಿತರ ಕಾರಣಗಳಿಂದ 24 ಮಂದಿ ಮೃತಪಟ್ಟಿದ್ದರು. ಈ ಘಟನೆಯಿಂದ ಹಿಡಿದು ಇಲ್ಲಿವರೆಗೆ ಒಟ್ಟು 88 ಮಂದಿ ಮೃತರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.

ಮೃತರ ಪೈಕಿಜಿಲ್ಲೆಯಅಮಚವಾಡಿ ಗ್ರಾಮದ ತಂದೆ ಮತ್ತು ಮಗ ಸೇರಿದ್ದಾರೆ. ಮತ್ತೊಬ್ಬ ಪುತ್ರಮೈಸೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ.ಸಂಜೀವ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಈ ಕುರಿತು ನನಗೇನೂ ಗೊತ್ತಿಲ್ಲ’ ಎಂದಷ್ಟೇ ಹೇಳಿ ಕರೆ ಮೊಟಕುಗೊಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಕೂಡಕರೆ ಸ್ವೀಕರಿಸಲಿಲ್ಲ.

ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್ ಪ್ರತಿಕ್ರಿಯಿಸಿ, ‘ರೋಗ ಉಲ್ಬಣಗೊಂಡ ನಂತರ ಕೊನೆಯ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುತ್ತಿರುವುದು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಾರಣ. ಜತೆಗೆ, ಆಸ್ಪತ್ರೆಯ ಮೇಲೂ ಅಧಿಕ ಒತ್ತಡ ಇದೆ’ಎಂದರು.

ಚಾಮರಾಜನಗರದ ಜಿಲ್ಲಾ ಕೋವಿಡ್–19 ಆಸ್ಪತ್ರೆ
ಚಾಮರಾಜನಗರದ ಜಿಲ್ಲಾ ಕೋವಿಡ್–19 ಆಸ್ಪತ್ರೆ

ಆಮ್ಲಜನಕದ ಸಂಗ್ರಹವಿದೆ:‘ಸಾವಿನ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಆಮ್ಲಜನಕದ ಕೊರತೆ ಕಾರಣ ಅಲ್ಲ’ ಎಂದು ಆಮ್ಲಜನಕ ಸರಬರಾಜು ವಿಭಾಗದ ನೋಡೆಲ್‌ ಅಧಿಕಾರಿ ಡಿಸಿಎಫ್ ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಮ್ಲಜನಕದ ಸಂಗ್ರಹ ಇರುವಂತೆವ್ಯವಸ್ಥೆ ಮಾಡಲಾಗಿದೆ.ನಿತ್ಯ 4.5 ಕೆ.ಎಲ್‌ ಆಮ್ಲಜನಕ ಬೇಕಿದೆ. 400 ಆಮ್ಲಜನಕದ ಸಿಲಿಂಡರ್‌ಗಳೂ ಇವೆ. ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಸಾಕಾಗುತ್ತದೆ’ ಎಂದರು.

ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 14 ಮಂದಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ವ್ಯಾಪಾರಸ್ಥರು ಪೊಲೀಸರ ಸೂಚನೆಗೂ ಕಾಯದೆಸ್ವಯಂಪ್ರೇರಿತರಾಗಿ ಭಾನುವಾರ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿದರು.

ಶುಕ್ರವಾರವಷ್ಟೇ ಆರೋಗ್ಯ ಇಲಾಖೆಯ ಪರಿಣತರ ತಂಡವೊಂದು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಾವಿನ ಕುರಿತು ಪರಿಶೀಲನೆ ನಡೆಸಿತ್ತು.

ಹಳ್ಳಿಗಳಲ್ಲಿ ಸೋಂಕು, ಸಾವು ಹೆಚ್ಚಳ: ಹೊಸ ಸೋಂಕಿತರು ಮತ್ತು ಮರಣ ಹೊಂದುತ್ತಿರುವವರ ಸಂಖ್ಯೆ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿದೆ. ಮೇ 4ರಿಂದ 9 ರವರೆಗೆ 16 ಮಂದಿಯಷ್ಟೇ ಪಟ್ಟಣ ಪ್ರದೇಶದವರು ಮೃತಪಟ್ಟಿದ್ದರೆ, 42 ಮಂದಿ ಗ್ರಾಮೀಣ ಪ್ರದೇಶದವರು ಸಾವಿಗೀಡಾಗಿದ್ದಾರೆ. ಪಟ್ಟಣ ಪ್ರದೇಶದ 723ಹಾಗೂಗ್ರಾಮೀಣ ಪ್ರದೇಶದ 3,237 ಮಂದಿಗೆ ಸೋಂಕು ತಗುಲಿದೆ.

‘ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಅವರನ್ನು ಪರೀಕ್ಷೆಗೆ ಯಾರೂ ಕರೆದುಕೊಂಡು ಹೋಗುವುದಿಲ್ಲ.ಗಂಭೀರವಾಸ್ಥೆ ತಲುಪಿದಾಗ ಮಾತ್ರವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT