ಭಾನುವಾರ, ಏಪ್ರಿಲ್ 11, 2021
32 °C

ಎಲ್ಲ ಲಿಂಗಾಯತರಿಗೆ 2ಎ ಮೀಸಲಾತಿಯ ಚಿಂತನೆ: ಸಚಿವ ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ‘ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಪಂಚಮಸಾಲಿ, ವಾಲ್ಮೀಕಿ, ಕುರುಬ ಜನಾಂಗದ
ವರು ಹೋರಾಟ ನಡೆಸುತ್ತಿದ್ದಾರೆ. ಲಿಂಗಾಯತ ಎಲ್ಲ ಜಾತಿಗಳನ್ನು 2ಎಗೆ ಸೇರಿಸುವ ಚಿಂತನೆ ಇದೆ. ಹಿಂದುಳಿದ ವರ್ಗದ ಆಯೋಗದಿಂದ ವರದಿ ಪಡೆದು ಸಂಪುಟದಲ್ಲಿ ಚರ್ಚೆ ನಡೆಸಿ ಮೀಸಲಾತಿ ನೀಡಲಾಗುವುದು’ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಶನಿವಾರ ಹೇಳಿದರು.

‘ವಿಜಯಾನಂದ ಕಾಶಪ್ಪನವರು ರಾಷ್ಟ್ರೀಯ ಮಟ್ಟದ ನಾಯಕರು. ಅವರಷ್ಟು ದೊಡ್ಡ ನಾಯಕರು ನಾವಲ್ಲ. ಮೀಸಲಾತಿಗೆ ನಾವು ಮುಂದಾಳತ್ವ ವಹಿಸುವುದಿಲ್ಲ. ಅದನ್ನು ಅವರಿಗೆ ಬಿಟ್ಟಿದ್ದೇವೆ. ದೇವರು ಅವರಿಗೆ ಎಷ್ಟು ಶಕ್ತಿ, ಸಾಮರ್ಥ್ಯ ನೀಡಿದ್ದಾನೆಯೋ ಅಷ್ಟು ಹೋರಾಟ ಮಾಡಲಿ. ಸರ್ಕಾರದ ಭಾಗವಾಗಿ ಕೇವಲ ಪಂಚಮಸಾಲಿ ಸಮಾಜಕ್ಕಲ್ಲ, ಒಟ್ಟಾರೆ ವೀರಶೈವ-ಲಿಂಗಾಯತ ಸಮಾಜಕ್ಕೆ ಏನು ‌ಮಾಡಬೇಕೋ ಅದನ್ನು ಮಾಡಲಿದ್ದೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು