ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ನಿರಾಕರಿಸಿದ ನಿರ್ವಾಹಕನಿಗೆ ಸಾವಿರ ರೂಪಾಯಿ ದಂಡ!

Last Updated 24 ಜನವರಿ 2021, 19:55 IST
ಅಕ್ಷರ ಗಾತ್ರ

ತುರುವೇಕೆರೆ: ಹಿರಿಯ ಪ್ರಯಾಣಿಕರಿಂದ ಐದು ರೂಪಾಯಿ ನೋಟು ಪಡೆಯಲು ನಿರಾಕರಿಸಿದ ಸಾರಿಗೆ ಬಸ್ ನಿರ್ವಾಹಕನಿಗೆ ವಿಭಾಗೀಯ ನಿಯಂತ್ರಕರು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಅರಸೀಕೆರೆ–ತಿಪಟೂರ ಬಸ್‌ನಲ್ಲಿತುರುವೇಕೆರೆಯ ಸೋಮಶೇಖರ್ ಎಂಬುವರು ಟಿಕೆಟ್‌ ಪಡೆಯಲು ದುಡ್ಡು ನೀಡಿದರು. ನಿರ್ವಾಹಕ 5 ರೂಪಾಯಿ ನೋಟು ಪಡೆಯಲು ನಿರಾಕರಿಸಿದ್ದಾನೆ. ಮಾತಿಗೆ ಮಾತು ಬೆಳೆದು ಹಿರಿಯರನ್ನು ಮಾರ್ಗಮಧ್ಯೆ ಇಳಿಸಲು ಒತ್ತಾಯಿಸಿ, ಕೊನೆಗೆ ನೇರವಾಗಿಪೊಲೀಸ್ ಠಾಣೆಗೆ ಬಸ್ ಕೊಂಡೊಯ್ದಿದ್ದಾನೆ.‌

ಪೊಲೀಸರು ಪ್ರಯಾಣಿಕನಿಂದ ಐದು ರೂಪಾಯಿ ನೋಟನ್ನು ಪಡೆದುಕೊಳ್ಳುವಂತೆ ತಾಕೀತು ಮಾಡಿ ವಿನಾಕಾರಣ ಕಿರುಕುಳ ನೀಡದಂತೆ ಬುದ್ದಿ ಹೇಳಿ ಕಳಿಸಿದ್ದಾರೆ. ನಿರ್ವಾಹಕನ ವರ್ತನೆಯಿಂದ ಮನನೊಂದ ಸೋಮಶೇಖರ್ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದರು.

ಪ್ರಯಾಣಿಕನಿಗೆ ವಿನಾಕಾರಣ ಕಿರುಕುಳ ನೀಡಿದ ನಿರ್ವಾಹಕ ಮಹೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಕರಿಗೆ ಕೆಎಸ್‌ಆರ್‌ಟಿಸಿ ಸೂಚನೆ ನೀಡಿತ್ತು.

ಸೂಚನೆ ಮೇರೆಗೆ ವಿಭಾಗೀಯ ನಿಯಂತ್ರಕರು ನಿರ್ವಾಹಕನ ವೇತನದಿಂದ ಸಾವಿರ ರೂಪಾಯಿ ಕಡಿತಗೊಳಿಸಿ, ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಎಚ್ಚರಿಕೆ ನೀಡಿದೆ. ನಿರ್ವಾಹಕನಿಂದಾದ ಕಿರುಕುಳಕ್ಕೆ ವಿಷಾದ ವ್ಯಕ್ತಪಡಿಸಿ ವಿಭಾಗೀಯ ನಿಯಂತ್ರಕರು ಸೋಮಶೇಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT