ಮನೆ ಬಳಿ 8 ದಿನದಿಂದ ಚಿರತೆ ಓಡಾಡುತ್ತಿದೆ, ಬೇಗ ಹಿಡಿಸಿ: ಕಾಂಗ್ರೆಸ್ ಶಾಸಕ

ಬೆಂಗಳೂರು: ‘ಚಿರತೆ ನನ್ನ ಮನೆಯ ಪ್ರದೇಶದ ಸುತ್ತಮುತ್ತಲೇ ಎಂಟು ದಿನಗಳಿಂದ ಓಡಾಡುತ್ತಿದೆ. ಆದಷ್ಟು ಬೇಗ ಹಿಡಿಸಿ’ ಎಂದು ಕಾಂಗ್ರೆಸ್‌ನ ಅಬ್ಬಯ್ಯ ಪ್ರಸಾದ್ ವಿಧಾನಸಭೆಯಲ್ಲಿ ಬುಧವಾರ ಪರಿ ಪರಿಯಾಗಿ ಮನವಿ ಮಾಡಿದರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಹುಬ್ಬಳ್ಳಿಯ ನೃಪತುಂಗ ಗುಡ್ಡದ ಬಳಿ ಚಿರತೆ ಬಂದು ಎಂಟು ದಿನ ಕಳೆದಿವೆ. ನನ್ನ ಮನೆಯೂ ಅಲ್ಲೆ ಇದೆ. ಚಿರತೆಯ ಹೆಜ್ಜೆ ಗುರುತು ಕಾಣಿಸಿದೆ. ಅದು ಪ್ರಾಯಕ್ಕೆ ಬಂದ ಚಿರತೆಯಾಗಿದ್ದು, ಮನುಷ್ಯರಿಗೆ ಏನೂ ಮಾಡುವುದಿಲ್ಲ. ಈಗಾಗಲೇ ಹಂದಿ, ಕುರಿಯನ್ನು ಹೊತ್ತುಕೊಂಡು ಹೋಗಿದೆ. ಸುತ್ತಮುತ್ತಲಿನ ಶಾಲೆಗಳು ಒಂದು ವಾರದಿಂದ ಬಂದ್ ಆಗಿವೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಜಗದೀಶ ಶೆಟ್ಟರ್, ಚಿರತೆಯಿಂದಾಗಿ ಹುಬ್ಬಳ್ಳಿಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಅದನ್ನು ಹಿಡಿಸಿ ಕಾಡಿಗೆ ಬಿಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಅರಣ್ಯ ಇಲಾಖೆ ಸಿಬ್ಬಂದಿ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಪರಿಣಿತರನ್ನು ಕರೆಸಿ, ಚಿರತೆಯನ್ನು ಹಿಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾತ್ರಿ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಸ್ಥಿತಿ ನಿರ್ಮಿಸಿದ್ದೇವಾ?: ಆರಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.