ಸಮಾನತೆಗಾಗಿ ಕಾಂಗ್ರೆಸ್, ಆರ್‌ಎಸ್‌ಎಸ್ ಎರಡನ್ನೂ ಸೋಲಿಸಬೇಕು: ನಟ ಚೇತನ್ ಅಹಿಂಸಾ

ಬೆಂಗಳೂರು: ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ಎರಡನ್ನೂ ಸೋಲಿಸಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿಕೊಂಡಿರುವ ಅವರು ಕಾಂಗ್ರೆಸ್ ಕೂಡ ಬ್ರಾಹ್ಮಣ್ಯವನ್ನು ಸಲುಹುವ ಸಂಸ್ಥೆ ಎಂದು ಕಿಡಿಕಾರಿದ್ದಾರೆ.
‘ಕಾಂಗ್ರೆಸ್ ಪಕ್ಷದ ಸದಸ್ಯರಾದ ಕೆಬಿ ಹೆಡ್ಗೆವಾರ್ ಅವರು 1925 ರಲ್ಲಿ ಆರ್‌ಎಸ್‌ಎಸ್ ಸ್ಥಾಪಿಸಿದರು. ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯರಾದ ಬಾಲ ಗಂಗಾಧರ ತಿಲಕ್ ಅವರು ಹೆಡ್ಗೆವಾರ್ ಅವರನ್ನು ಪ್ರಭಾವಿಸಿದ್ದರು. ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್ ( ಸಂಘ ಪರಿವಾರ ) ಯಾವತ್ತಿನಿಂದಲೂ ಒಂದಕ್ಕೊಂದು ಬೆಸೆದುಕೊಂಡೇ ಇದೆ.
ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್, ಎರಡಕ್ಕೂ ಲಾಭವಾಗುತ್ತದೆ. ಸಮಾನತೆಗಾಗಿ ಕಾಂಗ್ರೆಸ್ ಮತ್ತು ಸಂಘ ಎರಡನ್ನೂ ಸೋಲಿಸಬೇಕು‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Congress & BJP must both be defeated— how?
Congress will do anything for power; BJP has hate ideology
If we dismantle the BJP first, Congress will shapeshift & gain even more potency
If we dismantle Congress first, BJP’s ideology can then be crushed by our #equality ideology
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) September 9, 2021
ಇದನ್ನೂ ಓದಿ: ಸ್ವ–ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈಜಾಕ್ ಮಾಡಲು ಬಿಡಬಾರದು: ನಟ ಚೇತನ್
ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದರು
ಕಳೆದ ಶನಿವಾರ ಟ್ವೀಟ್ ಮಾಡಿದ್ದ ಚೇತನ್ ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದಿದ್ದರು. ‘ಸಿದ್ದರಾಮಯ್ಯ ಕರ್ನಾಟಕ ಮತ್ತು ಕಾಂಗ್ರೆಸ್‌ನ ಪ್ರಬಲ ನಾಯಕ. ಆದರೆ, ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ’ ಎಂದು ಹೇಳಿದ್ದರು.
‘ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ಜಾತಿ ವಿರೋಧಿ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ಅವರು ಹುಟ್ಟಿದ ಜಾತಿಗೆ ಮಾತ್ರ ಸೀಮಿತವಾಗಿದ್ದು, ಇತರ ಬಹು ಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತನಾಡುತ್ತಾರೆ’ ಎಂದು ಟೀಕಿಸಿದ್ದರು.
ಇದಕ್ಕೂ ಹಿಂದೆ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನೂ ಟ್ವೀಟ್ ಮೂಲಕ ಟೀಕೆ ಮಾಡಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಅವರ ‘ಕ್ರಾಂತಿಕಾರಿ’ ಮಾತುಗಳೆಲ್ಲವೂ ಅಸಂಬದ್ಧ: ನಟ ಚೇತನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.