ಬೆಂಗಳೂರಿನ ಇಡ್ಲಿ ಎಟಿಎಂ ಕುರಿತು ಪ್ರಶ್ನಿಸಿದ ಆನಂದ್ ಮಹೀಂದ್ರ

ಎರಡು ದಿನಗಳ ಹಿಂದಷ್ಟೆ ನಗರದಲ್ಲಿನ ಇಡ್ಲಿ ಎಟಿಎಂ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿತ್ತು. ಆ ವಿಡಿಯೊ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ಇಡ್ಲಿಯ ರುಚಿ ಹೇಗಿದೆ ಎಂಬುದಾಗಿ ಟ್ವೀಟ್‌ನಲ್ಲಿ ಬೆಂಗಳೂರಿಗರನ್ನು ಪ್ರಶ್ನಿಸಿದ್ದಾರೆ.
So many have attempted to create robotic food prep/vending machines. Presume this meets FSSAI standards & the ingredients are refreshed adequately? How is the taste, Bengaluru folks? I’d love to see this pop up in airports/malls globally. Will be a major ‘cultural’ export! pic.twitter.com/C8SjR6HwPK
— anand mahindra (@anandmahindra) October 16, 2022
‘ಬಹಳಷ್ಟು ಜನ ರೊಬೊಟಿಕ್ ಆಹಾರ ತಯಾರಿಕೆ/ವಿತರಣಾ ಯಂತ್ರಗಳನ್ನು ಉತ್ಪಾದಿಸಲು ಪ್ರಯತ್ನಿಸಿದ್ದಾರೆ. ಇದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರd (ಎಫ್‌ಎಸ್‌ಎಸ್‌ಎಐ) ಮಾನದಂಡಗಳನ್ನು ಪೂರೈಸುವುದು ಮತ್ತು ಪದಾರ್ಥಗಳನ್ನು ಸಮರ್ಪಕವಾಗಿ ತಾಜಾವಾಗಿಸಲು ಶಕ್ತವಾಗಿದೆಯೆ? ಬೆಂಗಳೂರಿಗರೇ ಇಡ್ಲಿ ರುಚಿ ಹೇಗಿದೆ? ಜಾಗತಿಕವಾಗಿ ವಿಮಾನ ನಿಲ್ದಾಣಗಳು/ಮಾಲ್‌ಗಳಲ್ಲಿ ಇದರ ಸ್ಥಾಪನೆ ನೋಡಲು ನಾನು ಇಷ್ಟಪಡುತ್ತೇನೆ’ ಎಂದು ಆನಂದ್ ಮಹೀಂದ್ರ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಗುಣಮಟ್ಟ, ರುಚಿ ಚೆನ್ನಾಗಿದೆ. ಆದಾಗ್ಯೂ ಮೆಷಿನ್ ಇಂದ ಬಂದ ಆಹಾರ ಮನುಷ್ಯರು ಪೂರೈಕೆ ಮಾಡಿದಂತಹ ಭಾವನೆ ನೀಡುತ್ತಿಲ್ಲ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಆಹಾರ ಉದ್ಯಮದಲ್ಲಾದರೂ ಉದ್ಯೋಗಕ್ಕೆ ಜಾಗವಿತ್ತು. ಇನ್ನು ಮೆಷಿನ್ ಅದನ್ನೂ ಕಿತ್ತುಕೊಳ್ಳಲಿದೆ ಎಂದು ಮತ್ತೊಬ್ಬ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡ್ಲಿ ತಿಂದು ಆರೋಗ್ಯವಾಗಿರಬಹುದೆ ಎಂಬುದಾಗಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಡ್ಲಿ ಬಾಟ್ ಅಥವಾ ಇಡ್ಲಿ ಎಟಿಎಂ ಎಂದು ಕರೆಯಲಾಗುವ ಈ ಯಂತ್ರದ ವಿಡಿಯೊ ವೈರಲ್ ಆಗಿತ್ತು. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹೀರಾಮತ್ ಮತ್ತು ಸುರೇಶ್ ಚಂದ್ರಶೇಖರನ್ ಫ್ರೆಶ್‌ಶಾಟ್ ರೊಬೊಟಿಕ್ಸ್ ಎಂಬ ಸ್ಟಾರ್ಟಪ್ ಮೂಲಕ ಇಡ್ಲಿ ಎಟಿಎಂ ಪ್ರಾರಂಭಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.