ಶಿವಮೊಗ್ಗ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗಳನ್ನು ನಿಷೇಧಿಸುವಕುರಿತುಆ.20ರಂದು ನಡೆಯುವಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದುಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಡ ಹೆಚ್ಚಾಗುತ್ತಿದೆ. ಕೆ.ಜೆ. ಹಳ್ಳಿ ಗಲಭೆ, ಶಂಕರಾಚಾರ್ಯರ ವಿಗ್ರಹದ ಮೇಲೆ ಬ್ಯಾನರ್ ಹಾಕಿರುವುದು ಮೌಲ್ಯಗಳ ಮೇಲೆ ನಡೆದ ಹಲ್ಲೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಖಂಡಿಸಿದರು.

‘ಗಲಭೆಗೆಯ ತನಿಖೆಗೆಕಾಂಗ್ರೆಸ್ಸತ್ಯಶೋಧನಾ ಸಮಿತಿ ರಚಿಸಿದೆ. ಅವರಿಂದಲಾದರೂಸತ್ಯ ಹೊರತರಲಿ. ಇದುವರೆಗೂ ಕಾಂಗ್ರೆಸ್ ನಾಯಕರು ಗಲಭೆಯನ್ನು ಖಂಡಿಸಿಲ್ಲ. ಮುಂದೆಯಾದರೂ ರಾಷ್ಟ್ರೀಯ ಮೌಲ್ಯವನ್ನೊಳಗೊಂಡ ರಾಜಕಾರಣ ಮಾಡಲಿ.ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು ಎಂದಿರುವ ಶಾಸಕ ಜಮೀರ್ ಅಹಮದ್ಒಬ್ಬ ರಾಷ್ಟ್ರದ್ರೋಹಿ. ಬಿಜೆಪಿಯರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧಟೀಕೆ ಮಾಡಿರುವ ಸಿದ್ದರಾಮಯ್ಯ ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

‘ನವೀನ್ ಬಿಜೆಪಿ ಕಾರ್ಯಕರ್ತನಲ್ಲ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನವೀನ್ ಬಿಜೆಪಿ ಕಾರ್ಯಕರ್ತ ಎಂದೇ ಡಿ.ಕೆ.ಶಿವಕುಮಾರ್ ಬಿಂಬಿಸುತ್ತಿದ್ದಾರೆ. ಇಂತಹ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದ ಅನುಭವಿ ನಾಯಕ ಸಿದ್ದರಾಮಯ್ಯ ಅವರಿಗೆ ಒಂದನೇ ತರಗತಿಯಿಂದ ಪಾಠ ಮಾಡಬೇಕಿದೆ.ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಅವರು ಭಯದ ಕಾರಣ ದೂರು ನೀಡಿಲ್ಲ. ಶಾಸಕರ ಮನೆಗೆ ಹೋಗಿ ಕಾಂಗ್ರೆಸ್ ನಾಯಕರು ಧೈರ್ಯ ತುಂಬುವ ಕೆಲಸ ಮಾಡಿಲ್ಲ’ ಎಂದೂ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಸತ್ಯನಾರಾಯಣ, ಕೆ.ವಿ.ಅಣ್ಣಪ್ಪಇದ್ದರು.

‘ಘಟನೆಯ ಹಿಂದೆ ಯಾವ ಪಕ್ಷವಿದೆ ಎಂದು ಜನರಿಗೇ ತಿಳಿದಿದೆ’
ಹಿರಿಯೂರು: ‘ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಯನ್ನು ಪೊಲೀಸರು ಸರಿಯಾಗಿಯೇ ನಿರ್ವಹಿಸಿದ್ದಾರೆ. ಇದು ಕೋಮುಗಲಭೆಯೇ, ಪಿತೂರಿಯೇ ಎನ್ನುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮತ್ತ ಅರ್ಥ ಮಾಡಿಕೊಳ್ಳಬೇಕು. ಘಟನೆಯ ಹಿಂದೆ ಯಾವ ರಾಜಕೀಯ ಪಕ್ಷವಿದೆ ಎನ್ನುವುದು ನಾಡಿನ ಜನರಿಗೆ ತಿಳಿದಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿಯಲ್ಲಿ ಶುಕ್ರವಾರ ಅಭಿಪ್ರಾಯಪಟ್ಟರು.

ಎಸ್ಡಿಪಿಐ ಅಥವಾ ಪಿಎಫ್ಐ ಸಂಘಟನೆ ನಿಷೇಧದ ಕುರಿತು ಮಾಹಿತಿ ಇಲ್ಲ. ಸರ್ಕಾರವೇ ಆ ಬಗೆಗೆ ತೀರ್ಮಾನಿಸಲಿ ಎಂದೂ ಹೇಳಿದರು.

ಕಾಂಗ್ರೆಸ್ ಪಾಪದ ಫಲವೇ ಗಲಭೆ: ವಿಶ್ವನಾಥ್
ಮೈಸೂರು: ‘ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಅವರಂತಹ ಕಾಂಗ್ರೆಸ್ ಮುಖಂಡರು ಸಿಎಎ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಮಾಡಿದ್ದ ಭಾಷಣದ ಬೆಂಕಿಯ ಉಂಡೆ, ಬೆಂಗಳೂರಿನಲ್ಲಿ ಈಗ ಹೊತ್ತಿಕೊಂಡು ಉರಿಯುತ್ತಿದೆ’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಶುಕ್ರವಾರ ಇಲ್ಲಿ ಆರೋಪಿಸಿದರು.

‘ಸಿಎಎ ವಿರೋಧಿಸಿ ನಡೆದ ಹೋರಾಟದ ವೇಳೆ ಕಾಂಗ್ರೆಸ್ ನಾಯಕರು ಮಾಡಿದ್ದ ಭಾಷಣ, ಜನರಿಗೆ ಮಾಡಿರುವ ಪ್ರಚೋದನೆ ಇನ್ನೂ ಬಿಸಿ ಕೆಂಡವಾಗಿಯೇ ಇದೆ. ಅದನ್ನು ಆರಿಸುವ ಗೋಜಿಗೆ ಯಾರೂ ಹೋಗಿಲ್ಲ. ಆ ಕೆಂಡವನ್ನು ಹಿಡಿದು ಮತ್ತೆ ಮತ್ತೆ ರಾಜಕಾರಣ ಮಾಡುವ ಪ್ರಯತ್ನ ಕಾಂಗ್ರೆಸ್ನಿಂದ ನಡೆಯುತ್ತಿದೆ’ ಎಂದು ಆಪಾದಿಸಿದರು.

ಜಮೀರ್ ಖಾನ್ ಅವರಂತಹ ನಾಯಕರು ಗಲಭೆ ಮಾಡಿದವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ಬೆಂಕಿಯಿಂದ ಮನೆ ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಯಾರೂ ಹೋಗುತ್ತಿಲ್ಲ. ಕಾಂಗ್ರೆಸ್ ಮಾಡಿದ ಪಾಪದ ಫಲದಿಂದಲೇ ಈ ಗಲಭೆ ನಡೆದು ಶಾಸಕರ ಮನೆ ಸುಟ್ಟಿದೆ ಎಂದು ದೂರಿದರು.

ಬೆಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್– ಎಸ್ಡಿಪಿಐ ನಡುವೆ ರಾಜಕೀಯ ನಡೆಯುತ್ತಿದೆ. ಆ ರಾಜಕಾರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.