ಬಳ್ಳಾರಿ ಮೂಲಕ ಬೆಂಗಳೂರು– ಹೈದರಾಬಾದ್ ವಿಮಾನ ಸೇವೆ

ಬಳ್ಳಾರಿ: ಬೆಂಗಳೂರಿನಿಂದ ಹೈದರಾ
ಬಾದಿಗೆ ತೋರಣಗಲ್‌ನ ವಿದ್ಯಾನಗರ ಮಾರ್ಗವಾಗಿ ಪ್ರತಿದಿನ ವಿಮಾನ ಸಂಚಾರ ಮತ್ತೆ ಆರಂಭವಾಗಿದೆ.
‘ಅಲಯನ್ಸ್’ ವಿಮಾನಯಾನ ಕಂಪನಿಯು ಈ ವಿಮಾನ ಸೇವೆ ಒದಗಿಸುತ್ತಿದ್ದು, ವಿದ್ಯಾನಗರದ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಿಗ್ಗೆ ವಿಮಾನವು ಮತ್ತೆ ಸಂಚಾರ ಆರಂಭಿಸಿತು.
ಹೈದರಾಬಾದ್ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8.55ಕ್ಕೆ ಹೊರಡುವ ವಿಮಾನ ವಿದ್ಯಾನಗರಕ್ಕೆ 10.20ಕ್ಕೆ ಬರಲಿದೆ. ವಿದ್ಯಾನಗರದಿಂದ 10.50ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 12.20ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.
ಬೆಂಗಳೂರಿನಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 4.15ಕ್ಕೆ ವಿದ್ಯಾನಗರಕ್ಕೆ ಬರಲಿದೆ. ವಿದ್ಯಾನಗರದಿಂದ ಸಂಜೆ 4.45ಕ್ಕೆ ಹೊರಡುವ ವಿಮಾನ ಹೈದರಾಬಾದ್ ವಿಮಾನ ನಿಲ್ದಾಣವನ್ನು ಸಂಜೆ 5.55ಕ್ಕೆ ಸೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.