ಗುರುವಾರ , ಮಾರ್ಚ್ 23, 2023
21 °C

ಡಿಕೆಶಿಗಿಂತ ಮೊದಲೇ ಸಿದ್ದರಾಮಯ್ಯಗೆ ಹೈಕಮಾಂಡ್‌ ತಲುಪುವ ಧಾವಂತ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಿಂತಲೂ ಮೊದಲು ಹೈಕಮಾಂಡ್ ತಲುಪುವ ಧಾವಂತ ಎಂದು ಬಿಜೆಪಿ ಟೀಕಿಸಿದೆ.

ಸಿಂದಗಿ ಮತ್ತು ಹಾನಗಲ್ ಉಪಚುನಾವಣೆ ಫಲಿತಾಂಶ ವಿಚಾರವಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವಿಟರ್ ಮೂಲಕ ಟೀಕಾಪ್ರಹಾರ ಮುಂದುವರಿಸಿದೆ.

ಓದಿ: 

‘ಹಾನಗಲ್ ಗೆಲುವು, ಸಿಂಧಗಿ ಸೋಲು ಸೇರಿದಂತೆ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದಾರೆ. ಅವರಿಗೆ ಕೆಪಿಸಿಸಿ ಅಧ್ಯಕ್ಷರಿಗಿಂತ‌‌ ಮೊದಲು ಹೈಕಮಾಂಡ್ ತಲುಪುವ ಧಾವಂತ. ಒಂದು ಫಲಿತಾಂಶ, ಹಲವು ಬಣ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ನಕಲಿ ಗಾಂಧಿ ಕುಟುಂಬದ ಭದ್ರಕೋಟೆ, ತವರು ಕ್ಷೇತ್ರ ಅಮೇಠಿಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್‌ ಗಾಂಧಿ ಅವರು ಸೋತಿದ್ದರು. ಮುಖ್ಯಮಂತ್ರಿಯಾಗಿದ್ದುಕೊಂಡೇ ಸಿದ್ದರಾಮಯ್ಯ ಅವರು ಸ್ವಕ್ಷೇತ್ರದಲ್ಲೇ ಸೋಲನುಭವಿಸಿದ್ದರು. ಒಂದು ಕ್ಷೇತ್ರವನ್ನು ಗೆದ್ದು ‘ಈ ಫಲಿತಾಂಶ ದೇಶಕ್ಕೆ ಸಂದೇಶ’ ಎನ್ನುವುದು ಮೂರ್ಖತನ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಓದಿ: 

‘ಉಪಚುನಾವಣೆ ಮುಂದಿನ ರಾಜಕೀಯದ ದಿಕ್ಸೂಚಿಯೇ ಎಂದು ಚುನಾವಣೆಗೆ‌ ಮುನ್ನ ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸದೇ ಜಾರಿಕೊಂಡಿದ್ದ ಡಿ.ಕೆ.ಶಿವಕುಮಾರ್ ಅವರೀಗ ಇದು ರಾಷ್ಟ್ರ ರಾಜಕಾರಣದ ಬದಲಾವಣೆ ಸಂಕೇತ ಎನ್ನುತ್ತಿದ್ದಾರೆ. ಗಾಳಿ ಬಂದತ್ತ ತೂರಿಕೊಳ್ಳುವುದು ನಾಯಕನ ಲಕ್ಷಣವಲ್ಲ’ ಎಂದು ಬಿಜೆಪಿ ಹೇಳಿದೆ.

ಸಿದ್ದರಾಮಯ್ಯ ಅವರೇ, ಕಳೆದ ಎರಡು ವರ್ಷದ ಅವಧಿಯಲ್ಲಿ ಎದುರಾದ ಉಪಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಗಮನಿಸಿದ್ದೀರಾ? ನಿಮಗೆ ಮರೆವಿನ ಸಮಸ್ಯೆ ಇಲ್ಲ ಎಂದಾದರೆ ನಾವು ಅಂಕಿ-ಸಂಖ್ಯೆ ನೀಡುವುದಿಲ್ಲ. ಇಲ್ಲವಾದರೆ ಅಂಕಿಸಂಖ್ಯೆಗಳ ಸಮೇತ ನಿಮ್ಮ ಅವಕಾಶವಾದಿತನದ ಹೇಳಿಕೆ ಬಿಚ್ಚಿಡಬೇಕಾಗುತ್ತದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು