ಶನಿವಾರ, ಸೆಪ್ಟೆಂಬರ್ 25, 2021
29 °C

ಕಣ್ಣೀರು ಹಾಕಿದ್ದ ಅಖಂಡರನ್ನು ಬೆದರಿಸಿದ್ದು ಡಿಕೆಶಿಗೆ ಮರೆತು ಹೋಯಿತೇ: ಬಿಜೆಪಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು ಸುರಿಸಿ, ನನಗೆ ನ್ಯಾಯ ಒದಗಿಸಿ ಎಂದು ಪರಿಪರಿಯಾಗಿ ಬೇಡಿದರೂ ಅವರ ಮೇಲೆಯೇ ಶಿಸ್ತು ಕ್ರಮದ ಬೆದರಿಕೆ ಹಾಕಿದ್ದು ಮರೆತು ಹೋಯಿತೇ ಡಿಕೆಶಿ?’

ಹೀಗೆಂದು ರಾಜ್ಯ ಬಿಜೆಪಿ ಘಟಕದ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರಿಗೆ ಪ್ರಶ್ನೆ ಹಾಕಲಾಗಿದೆ. 

ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು  ಇತ್ತೀಚೆಗೆ ನಡೆದ ಸಾಧನ ಸಮಾವೇಶದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿ, ಕಣ್ಣೀರು ಹಾಕಿದ್ದರು. ಯಡಿಯೂರಪ್ಪ ಅವರ ಕಣ್ಣೀರು ಮತ್ತು ನೋವಿಗೆ ಕಾರಣವೇನು ಎಂಬುದು ಬಹಿರಂಗವಾಗಬೇಕು ಎಂದು ಡಿ.ಕೆ ಶಿವಕುಮಾರ್‌ ಆಗ್ರಹಿಸಿದ್ದರು. 

ಈ ಹಿನ್ನೆಲೆಯಲ್ಲಿ ಗುರುವಾರ ಟ್ವೀಟ್‌ ಮಾಡಿ ಡಿಕೆಶಿಗೆ ತಿವಿದಿರುವ ಬಿಜೆಪಿ ‘ತನ್ನದೇ ಪಕ್ಷದ ದಲಿತ ಶಾಸಕನ ಕಣ್ಣೀರಿಗೆ ಕರಗದ ಡಿ.ಕೆ. ಶಿವಕುಮಾರ್‌ ಈಗ ಆಡಳಿತ ಪಕ್ಷದ ನಾಯಕರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ,‘ ಎಂದು ವ್ಯಂಗ್ಯವಾಡಿದೆ. 

‘ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರು ಸುರಿಸಿ, ನನಗೆ ನ್ಯಾಯ ಒದಗಿಸಿ ಎಂದು ಪರಿಪರಿಯಾಗಿ ಬೇಡಿದರೂ ಅವರ ಮೇಲೆಯೇ ಶಿಸ್ತು ಕ್ರಮದ ಬೆದರಿಕೆ ಹಾಕಿದ್ದು ಮರೆತು ಹೋಯಿತೇ ಡಿಕೆಶಿ?,‘ ಎಂದೂ ಪ್ರಶ್ನೆ ಮಾಡಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು