ಬೆಂಗಳೂರು: ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟ್ವೀಟ್ ಸಮರ ತಾರಕಕ್ಕೆ ಏರಿದೆ.

‘ಸಾವನ್ನು ಸಂಭ್ರಮಿಸುವ ವ್ಯಕ್ತಿ’ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮಾಡಿರುವ ಟ್ವೀಟ್‌ಗೆ ಬಿಜೆಪಿ ಕಿಡಿ ಕಾರಿದೆ.

‘ಗುಜರಾತ್ ಗಲಭೆ ಸಾವಿರ ಜನ, ನೋಟ್ ಬ್ಯಾನ್ ನೂರಾರು ಜನ, ರೈತ ಹೋರಾಟ 300 ಕ್ಕೂ ಹೆಚ್ಚು ಜನ, ವಲಸೆ ಕಾರ್ಮಿಕರು ಸಾವಿರಾರು ಜನ. ಸಾವಿನ ಮೆರವಣಿಗೆಯನ್ನೇ ಮಾಡಿದ ಇತಿಹಾಸ ಹೊಂದಿದ ಕೊಲೆಗಡುಕ ಫಕೀರನಿಗೆ ಕೊರೋನಾ ಸಾವುಗಳಿಂದ ಹೃದಯ ಕರಗದು. ಆತ ಸಾವುಗಳನ್ನು ಸಂಭ್ರಮಿಸುವ ವಿಕೃತ ವ್ಯಕ್ತಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸಿಖ್ ಹತ್ಯಾಕಾಂಡ ನಿಮ್ಮದಲ್ಲವೇ: ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಇಂತಹ ಮಾತುಗಳಿಂದ ಮೋದಿ ವಿಚಲಿತರಾಗು
ತ್ತಾರೆ ಎನ್ನುವ ಭ್ರಮೆಯಿಂದ ಕಾಂಗ್ರೆಸ್ ಹೊರಗೆ ಬರಬೇಕು. ನಕಲಿ ಗಾಂಧಿ ಪರಿವಾರದ ಇಟಲಿ ಪ್ರಜೆ ಈ ಹಿಂದೆ, ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದಿದ್ದರು. ಈ ಮಾತಿಗೆ ಜನರೇ ತಕ್ಕ ಉತ್ತರ ನೀಡಿದ್ದರು. ಇಂದಿರಾ ಗಾಂಧಿಯ ಹತ್ಯೆಯ ನಂತರ ಕಾಂಗ್ರೆಸ್ ಮಾಡಿದ ಸಿಖ್ ಹತ್ಯಾಕಾಂಡವನ್ನು ದೇಶ ಮರೆತಿಲ್ಲ’ ಎಂದು ಕುಟುಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.