ಲಸಿಕೆಯಲ್ಲಿ ಮಾಂಸದ ಅಂಶವಿದ್ದರೂ ತೆಗೆದುಕೊಳ್ಳಿ: ಅಬ್ದುಲ್ ಅಜೀಂ
ಮಡಿಕೇರಿ: ‘ಜನರ ಆರೋಗ್ಯದ ದೃಷ್ಟಿಯಿಂದ ಔಷಧಿಯಲ್ಲಿ ಪೋರ್ಕ್ನ ಅಂಶವಿದ್ದರೂ ತೆಗೆದುಕೊಳ್ಳಬಹುದು ಎಂದು ಈ ಹಿಂದೆ ಪ್ರವಾದಿಯೊಬ್ಬರು ಹೇಳಿದ್ದರು. ಅದರಂತೆ, ಕೊರೊನಾ ತೊಲಗಿಸಲು ಲಸಿಕೆಯಲ್ಲಿ ಯಾವುದೇ ಮಾಂಸದ ಅಂಶವಿದ್ದರೂ ಅಲ್ಪಸಂಖ್ಯಾತರು ಭಯಪಡದೆ ತೆಗೆದುಕೊಳ್ಳಬಹುದು’ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಇಲ್ಲಿ ಮನವಿ ಮಾಡಿದರು.
‘ಲಸಿಕೆ ವಿತರಣೆ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಜನರ ಆರೋಗ್ಯ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಲಸಿಕೆ ತುರ್ತು ಬಳಕೆ ಅಗತ್ಯವಿದೆ. ಮುಸ್ಲಿಮರು ಆತಂಕವಿಲ್ಲದೆ ಲಸಿಕೆ ತೆಗೆದುಕೊಳ್ಳಬಹುದು’ ಎಂದು ಮಂಗಳವಾರ ಹೇಳಿದರು.
‘ಒಂದು ವರ್ಷದ ಸಂಶೋಧನೆಯ ಬಳಿಕ ಕೊರೊನಾ ತಡೆ ಲಸಿಕೆ ಬಳಸಬಹುದು ಎಂಬುದು ಕೆಲವರ ವಾದ. ಆದರೆ, ನಾವು ತುರ್ತು, ಕಠಿಣ ಸಂದರ್ಭದಲ್ಲಿದ್ದೇವೆ. ಭಾರತದ ಕೋವಿಡ್ ತಡೆ ಲಸಿಕೆಯಿಂದ ಯಾರ ಜೀವಕ್ಕೂ ಆಪತ್ತು ಇರುವುದಿಲ್ಲ’ ಎಂದು ಅಬ್ದುಲ್ ಅಜೀಂ ಹೇಳಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.