ಗುರುವಾರ , ಡಿಸೆಂಬರ್ 1, 2022
20 °C

ಪಿಎಫ್‌ಐ, ಬಿಜೆಪಿಯದ್ದು ಯಾವ ಜನ್ಮದ ಮೈತ್ರಿ: ಕಾಂಗ್ರೆಸ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಫ್‌ಐ ಬಿಜೆಪಿಯ ಬಿ ಟೀಂ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿಕೆ ನೀಡಿದ್ದರು. 

ಈ ಕುರಿತು ‘ಪ್ರಜಾವಾಣಿ’ ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.  

ಪಿಎಫ್‌ಐ ನಿಷೇಧದ ಬಗ್ಗೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಬಿಜೆಪಿ ನಾಯಕರು ‘ಪಿಎಫ್‌ಐ ಹಾಗೂ ಎಸ್‌ಡಿಪಿಐ ಬಿಜೆಪಿಯ ಬಿ ಟೀಂ’ ಎಂಬ ಶ್ರೀರಾಮಸೇನೆಯ ಹೇಳಿಕೆಯನ್ನು ಖಂಡಿಸುವ ಧೈರ್ಯ ತೋರಲಿಲ್ಲವೇಕೆ ಎಂದು ಪ್ರಶ್ನಿಸಿದೆ.

‘ಕನಿಷ್ಠ ಸ್ಪಷ್ಟನೆ ನೀಡದೆ ಮೌನವಹಿಸಿದ್ದಾರೆ ಎಂದರೆ ಈ ಆರೋಪದಲ್ಲಿ ಗಂಭೀರವಾದ ಸತ್ಯ ಅಡಗಿದೆ ಅಲ್ಲವೇ ಪಿಎಫ್‌ಐ, ಬಿಜೆಪಿಯದ್ದು ಯಾವ ಜನ್ಮದ ಮೈತ್ರಿ’ ಎಂದು ಕೆಪಿಸಿಸಿ ಕೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು