ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ಡಿಕೆಶಿ ಅವರನ್ನು ಒಗ್ಗೂಡಿಸಲು ಯಾರಿಂದಲೂ ಸಾಧ್ಯವಿಲ್ಲ: ಬಿಜೆಪಿ

Last Updated 7 ನವೆಂಬರ್ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಸ್ಥಾನದಕನಸು ಕಾಣುತ್ತಿದ್ದಾರೆ. ಅವರಿಬ್ಬರನ್ನು ಒಗ್ಗೂಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಪೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ಪಕ್ಷದ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ,ಕಾಂಗ್ರೆಸ್‌ ಪಕ್ಷದ ಎವರ್ ಗ್ರೀನ್ ಬಾಲಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಒಗ್ಗೂಡಿಸಲು ಮಾಡಿದ ಎಲ್ಲಾ ಕಸರತ್ತುಗಳು ವಿಫಲವಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕರಂತೆಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಡುತ್ತಿಲ್ಲ.ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಗರು ಜೊತೆಯಾಗಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದೆ.

ಜನಸಂಕಲ್ಪ ಯಾತ್ರೆಗೆ ರಾಜ್ಯಾದಾದ್ಯಂತ ಸಿಗುತ್ತಿರುವ ಜನ ಬೆಂಬಲದಿಂದಸಿದ್ದರಾಮಯ್ಯಕಂಗಾಲಾಗಿದ್ದಾರೆ.ರಾಹುಲ್ ಗಾಂಧಿ ಸಹಿತ ಯಾರಿಂದಲೂ ಸಿದ್ದರಾಮಯ್ಯ ಮತ್ತುಡಿ.ಕೆ.ಶಿವಕುಮಾರ್‌ ಅವರನ್ನು ಜೋಡಿಸಲು ಸಾಧ್ಯವಿಲ್ಲ.ಇವರಿಬ್ಬರು ಒಂದಾಗಲು ಕುರ್ಚಿಯ ಆಸೆ ಬಿಡಬೇಕು. ಸಿದ್ದರಾಮಯ್ಯ ನಿಮ್ಮಿಂದ ಸಿಎಂ ಕುರ್ಚಿ ಆಸೆ ಬಿಡಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯಅವರು ಕನಸು ಕಾಣುತ್ತಿದ್ದಾರೆ.ಸಿದ್ದರಾಮಯ್ಯನವರೇ, ನೀವು ಅಧಕಾರಕ್ಕೆ ಬರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿಮಗಾಗಿ ಒಂದು ಕ್ಷೇತ್ರವನ್ನು ಮೊದಲು ಅಂತಿಮಗೊಳಿಸಿ.ನೀವೆಲ್ಲೇ ಸ್ಪರ್ಧಿಸಿದರೂ ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌ ನಿಮಗೆ ಖೆಡ್ಡಾ ತೋಡುವುದು ಖಚಿತ ಎಂದು ಬಿಜೆಪಿ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT