ಗುರುವಾರ , ಡಿಸೆಂಬರ್ 1, 2022
25 °C

ಸಿದ್ದರಾಮಯ್ಯ, ಡಿಕೆಶಿ ಹೇಳಿಕೊಟ್ಟಿದ್ದನ್ನೇ ಹೇಳಬೇಡಿ: ರಾಹುಲ್‌ ವಿರುದ್ಧ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಿಕೊಟ್ಟಿದ್ದನ್ನು ಹಾದಿ-ಬೀದಿಯಲ್ಲಿ ಹೇಳುವಂತವರಾಗಬೇಡಿ. ಇದು ನಿಮ್ಮ ಅಪ್ರಬುದ್ದತೆಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.
 
ರಾಜ್ಯ ಸರ್ಕಾರದ ವಿರುದ್ಧ ಶೇ 40 ರ ಲಂಚದ ಸರ್ಕಾರ ಎಂಬ ರಾಹುಲ್ ಟೀಕೆಯನ್ನು ಖಂಡಿಸಿರುವ ಅವರು, ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ, ಸುಖಾ ಸುಮ್ಮನೆ, ಪ್ರಚಾರಕ್ಕಾಗಿ ಆರೋಪ  ಮಾಡಬೇಡಿ ಎಂದಿದ್ದಾರೆ.

ಈ ಹಿಂದಿನ ಕೇಂದ್ರದ ಮನಮೋಹನ ಸಿಂಗ್ ಮತ್ತು ರಾಜ್ಯದ ಸಿದ್ದರಾಮಯ್ಯ ಸರ್ಕಾರವೇ ಸಾಲು ಸಾಲು ಹಗರಣಗಳಲ್ಲಿ ಭಾಗಿಯಾಗಿತ್ತು ಎಂಬುವುದನ್ನು ನೀವು ಮರೆತಿದ್ದೀರಿ ಎಂದು ಅವರು ನೆನಪಿಸಿದ್ದಾರೆ.

ರಾಜ್ಯದಲ್ಲಿ  ಕಾಂಗ್ರೆಸ್   ಸರ್ಕಾರ  ಇದ್ದಾಗ  ಮಕ್ಕಳಿಗಾಗಿ ಹಾಸಿಗೆ, ತಲೆದಿಂಬು ಖರೀದಿಸಿದಾಗ ಅಕ್ರಮ ನಡೆದಿತ್ತು.
ಅರ್ಕಾವತಿ ಬಡಾವಣೆಯ ರೀಡೂ, ಮರಳು ಲೂಟಿ, ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ , ಬಿಬಿಎಂಪಿ ಕಸ  ಹಾಗೂ ಕೊಳಗೇರಿ ಮಂಡಳಿಯ ಹಗರಣಗಳು ನಡೆದಿದ್ದವು. ಇದನ್ನು ನಿಮಗೆ ನೆನಪಿಸುತ್ತಿದ್ದೇವೆ ಎಂದು ರವಿಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಸದ್ಯದ ಪರಿಸ್ಥಿತಿ ಜೈಲ್ ಕಾಂಗ್ರೆಸ್, ಬೇಲ್ ಕಾಂಗ್ರೆಸ್ ಎಂಬಂತಿದೆ. ಅಂತಹ ಪಕ್ಷದವರ ಉಪದೇಶ ಬಿಜೆಪಿಗೆ ಅವಶ್ಯ ಇಲ್ಲ ಎಂದಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು