ಗುರುವಾರ , ಆಗಸ್ಟ್ 5, 2021
23 °C

ಪ್ರಧಾನಿ ಮೋದಿ ಭೇಟಿ ಮಾಡಿದ ಯಡಿಯೂರಪ್ಪ: ರಾಜ್ಯದ ಅಭಿವೃದ್ಧಿ ಈಡೇರಿಕೆಯ‌ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವದೆಹಲಿಯಲ್ಲಿ ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ‌ ಚರ್ಚಿಸಿದರು.

ರಾಜ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದ್ದು, ಈಡೇರಿಸುವುದಾಗಿ ಭರವಸೆ‌ ನೀಡಿದ್ದಾರೆ ಎಂದು ಯಡಿಯೂರಪ್ಪ ಅವರು ಪ್ರಧಾನಿ ಭೇಟಿಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಶನಿವಾರ ಮತ್ತಷ್ಟು ಮುಖಂಡರೊಂದಿಗೆ‌ ಚರ್ಚಿಸುವೆ’ ಎಂದ ಅವರು, ‘ನಾಯಕತ್ವ ಬದಲಾವಣೆ ಸಾಧ್ಯತೆ ಇದೆಯೇ?’ ಎಂದು ಕೇಳಲಾದ‌ ಪ್ರಶ್ನೆಗೆ ನಗುತ್ತಲೇ ಉತ್ತರಿಸಿ, ‘ನನಗೇನೂ ಗೊತ್ತಿಲ್ಲ. ನೀವೇ ಹೇಳಿ’ ಎಂದು ಹೇಳಿದರು.

ಕೇಂದ್ರ ಸಂಪುಟಕ್ಕೆ ರಾಜ್ಯದಿಂದ ಸೇರಿರುವ ನೂತನ ಸಚಿವರಿಗೆ ರಾತ್ರಿ ಭೋಜನ ಕೂಟ ಏರ್ಪಡಿಸಿದ್ದಾಗಿ ಅವರು ಹೇಳಿದರು.

ಇದನ್ನೂ ಓದಿ... ಲಿಂಗಾಯತರನ್ನು ಕಾಂಗ್ರೆಸ್‌ನತ್ತ ಸೆಳೆಯುವುದು ನಿಶ್ಚಿತ: ಎಂ.ಬಿ.ಪಾಟೀಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು