ಮಂಗಳವಾರ, ಆಗಸ್ಟ್ 16, 2022
21 °C

ಸ್ಥಗಿತಗೊಂಡ ಬಸ್‌ ಸೇವೆ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಬಸ್‌ ಸಂಚಾರ ಸ್ಥಗಿತಗೊಳಿಸಿ ಶುಕ್ರವಾರ ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದಾರೆ.

ನಸುಕಿನಲ್ಲಿ ಎಂದಿನಂತೆ ಆರಂಭವಾದ ಬಸ್‌ ಸಂಚಾರ ಬೆಳಿಗ್ಗೆ 7 ಗಂಟೆಯ ಬಳಿಕ ಸ್ಥಗಿತಗೊಂಡಿತು. ಸೇವೆಯಿಂದ ಹೊರಗುಳಿದ ಚಾಲಕರು ಹಾಗೂ ನಿರ್ವಾಹಕರು ಬಸ್‌ ನಿಲುಗಡೆ ಮಾಡಿದರು. ಬೇರೆ ಊರಿಗೆ ತೆರಳಲು ಬಂದಿದ್ದ ಸಿಬ್ಬಂದಿ ಸಮಸ್ಯೆ ಎದುರಿಸಬೇಕಾಯಿತು.

ಶಿವಮೊಗ್ಗ, ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಕೆಲ ಬಸ್‌ಗಳು ಚಿತ್ರದುರ್ಗ ಬಸ್‌ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಸೇವೆ ಒದಗಿಸಲಿಲ್ಲ. ಮಾರ್ಗ ಮಧ್ಯೆ ಬಸ್‌ ನಿಲುಗಡೆ ಮಾಡುವ ಅನಿವಾರ್ಯತೆ ಸೃಷ್ಟಿಯಾದರೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಪ್ರಯಾಣ ಮುಂದುವರಿಸಿದವು. ಚಿತ್ರದುರ್ಗ ಡಿಪೊದ ಬಸ್‌ಗಳು ಮಾತ್ರ ಸಂಚಾರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು