ಶನಿವಾರ, ಮೇ 21, 2022
27 °C

ಬಾಯಿತಪ್ಪಿನಿಂದ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ: ಸಚಿವ ಭೈರತಿ ಬಸವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಬೈಕ್‌, ಆಟೋ ರಿಕ್ಷಾ, ಪ್ರಿಡ್ಜ್‌ ಹೊಂದಿರುವ ಬಡ ಕುಟುಂಬಕ್ಕೆ ಪಡಿತರ ವಿತರಣೆಗೆ ಅವಕಾಶವಿದೆ. ಸಚಿವ ಉಮೇಶ್‌ ಕತ್ತಿ ಅವರು ಈ ರೀತಿ ಹೇಳಲು ಹೋಗಿ ಬಾಯಿತಪ್ಪಿನಿಂದ ಅವಕಾಶವಿಲ್ಲ ಎಂದಿರಬಹುದು’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಇಲ್ಲಿ ಸೋಮವಾರ ಸ್ಪಷ್ಟನೆ ನೀಡಿದರು.

‘ಅವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುತ್ತೇನೆ. ತಮ್ಮ ಹೇಳಿಕೆಗೆ ಕತ್ತಿ ಅವರೇ ಸ್ಪಷ್ಟನೆ ನೀಡಲಿದ್ದಾರೆ ಎಂದ ಅವರು, ಬಿಪಿಎಲ್‌ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಕಾರ್ಡ್‌ ವಿತರಣೆಗೆ ಮರು ಚಾಲನೆ ನೀಡಲಾಗಿದೆ.

ಇಂತಹ ಸಂದರ್ಭದಲ್ಲಿ ಪಡಿತರ ವಿತರಣೆ ಸ್ಥಗಿತದಂತಹ ಆದೇಶ ಹೊರಡಿಸುವುದಿಲ್ಲ’ ಎಂದು ಸಚಿವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು